ಕರ್ನಾಟಕ

karnataka

ETV Bharat / state

ಸಾರ್ವಜನಿಕ ಸಾರಿಗೆ ಬಳಕೆಗೆ ಹಿಂದೇಟು : ದರ ಏರಿಸಿದ ಆಟೋ,ಟ್ಯಾಕ್ಸಿಗಳು - ಲಾಕ್​​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿದ ಆಟೋ ಚಾಲಕರು

ಈ ಕುರಿತು ಆಟೋ ಮಾಲೀಕರನ್ನು ಸಾರ್ವಜನಿಕರು ಪ್ರಶ್ನಿಸಿದರೆ, ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿದೆ. ಪೊಲೀಸರು ದಂಡ, ತೆರಿಗೆ, ಇನ್ಶೂರೆನ್ಸ್ ಕಟ್ಟಬೇಕು ಎಂದು ಸಿದ್ಧ ಉತ್ತರ ನೀಡುತ್ತಾರೆ..

Auto
ಆಟೋ

By

Published : Nov 14, 2020, 1:49 PM IST

ಚಿಕ್ಕಮಗಳೂರು :ಲಾಕ್​ಡೌನ್​​ನಿಂದ ಎಲ್ಲಾ ಕ್ಷೇತ್ರಗಳಿಗೂ ಸಾಕಷ್ಟು ಹೊಡೆತ ಬಿದ್ದಿದೆ. ಸಾರಿಗೆ ವ್ಯವಸ್ಥೆಯ ಮೇಲೆ ಅಡ್ಡ ಪರಿಣಾಮ ಬೀರಿದ್ದು, ಟ್ಯಾಕ್ಸಿ, ಆಟೋ, ಖಾಸಗಿ ಬಸ್​​​ಗಳು ಕೋವಿಡ್​ ನಷ್ಟದ ನೆಪ ಹೇಳಿ ಸಾರ್ವಜನಿಕರಿಂದ ದುಪ್ಪಟ್ಟು ದರ ಪೀಕುತ್ತಿವೆ. ಈ ಕುರಿತ ದೂರುಗಳು ದಿನೇದಿನೆ ಕೇಳಿ ಬರುತ್ತಿದ್ದರೂ ಅದರ ವಿರುದ್ಧ ಸರ್ಕಾರ ಕ್ರಮಕ್ಕೆ ಮುಂದಾಗ್ತಿಲ್ಲ.

ನಗರ ಪ್ರದೇಶದಲ್ಲಿ ಕೋವಿಡ್​ ಭಯದಿಂದ ಸಾರ್ವಜನಿಕ ಸಾಮೂಹಿಕ ಸಾರಿಗೆ ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ. ಇದನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಆಟೋ, ಟ್ಯಾಕ್ಸಿ ಮಾಲೀಕರು ದರ ಏರಿಸಿ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಿದ್ದಾರೆ.

ಅಲ್ಲದೆ, ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆ ಸಾಗಿಸಲು ಬಳಸುವ ವಾಹನಗಳು ಸಹ ಬೆಲೆ ಏರಿಕೆ ಮಾಡಿವೆ. ಈ ಮೂಲಕ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ.

ದರ ಏರಿಸಿದ ಕುರಿತ ಅಭಿಪ್ರಾಯ

ಈ ಕುರಿತು ಆಟೋ ಮಾಲೀಕರನ್ನು ಸಾರ್ವಜನಿಕರು ಪ್ರಶ್ನಿಸಿದರೆ, ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿದೆ. ಪೊಲೀಸರು ದಂಡ, ತೆರಿಗೆ, ಇನ್ಶೂರೆನ್ಸ್ ಕಟ್ಟಬೇಕು ಎಂದು ಸಿದ್ಧ ಉತ್ತರ ನೀಡುತ್ತಾರೆ.

ಸೀಟ್ ಲೆಕ್ಕ ಹಾಕಲು ಬಿಡುತ್ತಿಲ್ಲ. ಆರ್​​​​ಟಿಒ ಅಧಿಕಾರಿಗಳ ಹಾವಳಿ ಹೆಚ್ಚಾಗಿದೆ. ವರ್ಷಕ್ಕೆ ₹8,500 ಸಾವಿರ ಇನ್ಶೂರೆನ್ಸ್ ಆಗಿದೆ. ಸ್ವಲ್ವ ಹೆಚ್ಚು ಹಣ ಕೇಳಿದ್ರೆ ಸಾರ್ವಜನಿಕರು ಕೊಡಲು ಹಿಂದೇಟು ಹಾಕುತ್ತಾರೆ.

ಈ ಹಿಂದೆ ಉತ್ತಮವಾಗಿ ಸಂಪಾದನೆ ಮಾಡುತ್ತಿದ್ದ ನಾವು ಈಗ ₹200 ಸಂಪಾದನೆ ಮಾಡಲು ಸಾಧ್ಯವಾಗದಂತಿದೆ ಎಂದು ಅಳಲು ತೋಡಿಕೊಳ್ತಾರೆ.

ABOUT THE AUTHOR

...view details