ಚಿಕ್ಕಮಗಳೂರು:ನಾಗರಹಾವನ್ನು ಹಿಡಿದು ಅದರ ಹಲ್ಲನ್ನು ಕಿತ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಹಾವಿನ ಹಲ್ಲು ಕಿತ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯ ಬಂಧನ - undefined
ನಾಗರಹಾವನ್ನು ಹಿಡಿದು ಅದರ ಹಲ್ಲನ್ನು ಕಿತ್ತು ಬ್ಯಾಗಿನಲ್ಲಿ ಹಾಕಿಕೊಂಡು ಮಳಲೂರು ಬಸ್ ನಿಲ್ಡಾಣಕ್ಕೆ ಬಂದಿದ್ದನು. ಅದೇ ಸಂದರ್ಭದಲ್ಲಿ ಸ್ಥಳೀಯರ ಖಚಿತ ಮಾಹಿತಿಯ ಮೇರೆಗೆ ಚಿಕ್ಕಮಗಳೂರು ತಾಲೂಕಿನ ವಲಯ ಅರಣ್ಯಧಿಕಾರಿ ಶಿಲ್ವ ಅವರ ನೇತೃತ್ವದಲ್ಲಿ ದಾಳಿ ಮಾಡಿದ್ದು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಹಾವನ್ನು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಮಳಲೂರು ಗ್ರಾಮದಲ್ಲಿ ರಾಮಯ್ಯ ಎಂಬ ವ್ಯಕ್ತಿ ನಾಗರಹಾವನ್ನು ಹಿಡಿದು ಅದರ ಹಲ್ಲನ್ನು ಕಿತ್ತು ಬ್ಯಾಗಿನಲ್ಲಿ ಹಾಕಿಕೊಂಡು ಮಳಲೂರು ಬಸ್ ನಿಲ್ಡಾಣಕ್ಕೆ ಬಂದಿದ್ದನು. ಅದೇ ಸಂದರ್ಭದಲ್ಲಿ ಸ್ಥಳೀಯರ ಖಚಿತ ಮಾಹಿತಿಯ ಮೇರೆಗೆ ಚಿಕ್ಕಮಗಳೂರು ತಾಲೂಕಿನ ವಲಯ ಅರಣ್ಯಧಿಕಾರಿ ಶಿಲ್ಪ ಅವರ ನೇತೃತ್ವದಲ್ಲಿ ದಾಳಿ ಮಾಡಿದ್ದು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಹಾವನ್ನು ವಶಪಡಿಸಿಕೊಂಡಿದ್ದಾರೆ.
ನಂತರ ಆರೋಪಿಯನ್ನು ಚಿಕ್ಕಮಗಳೂರು ಅರಣ್ಯ ಇಲಾಖೆಗೆ ಕರೆ ತಂದೂ ವಿಚಾರಣೆ ನಡೆಸಿದ್ದು ಯಾರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಎಂಬುದನ್ನು ಆರೋಪಿ ಬಾಯಿ ಬಿಟ್ಟಿಲ್ಲ. ಈ ಕುರಿತು ರಾಮಯ್ಯ ವಿರುದ್ದ ಚಿಕ್ಕಮಗಳೂರು ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲು ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಶ ಪಡಿಸಿಕೊಂಡಿದ್ದ ನಾಗರಹಾವನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗಿದೆ.