ಚಿಕ್ಕಮಗಳೂರು:ಜುಲೈ 12 ರಂದು ಚಿಕ್ಕಮಗಳೂರಿನ ಉಂಡೇ ದಾಸರಹಳ್ಳಿ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಭಾವಿಸಿದ್ದ ವ್ಯಕ್ತಿ, ಇದೀಗ ಆರಾಮಾಗಿ ಓಡಾಡಿಕೊಂಡಿದ್ದಾರೆ. ಸತ್ತು ಹೋಗಿದ್ದಾರೆಂದು ಭಾವಿಸಿದ್ದ ವ್ಯಕ್ತಿಯನ್ನ ರಸ್ತೆಯಲ್ಲಿ ಕಂಡು ಅಧಿಕಾರಿಗಳೇ ಮೂಕವಿಸ್ಮಿತರಾಗಿದ್ದಾರೆ.
ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಸಿಟಿ ರೌಂಡ್ಸ್ನಲ್ಲಿ ಇದ್ದಾಗ, ಸುರೇಶ ತನ್ನ ಪತ್ನಿ ಜೊತೆ ಹೋಗುತ್ತಿದ್ದ. ಇದನ್ನು ನೋಡಿದ ಕೂಡಲೇ ಗಾಡಿ ನಿಲ್ಲಿಸಿದ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ವಿಚಾರಿಸಿದಾಗ, ಅರ್ಧಂಬರ್ಧ ಮಾತನಾಡಿ ಎಸ್ಕೇಪ್ ಆಗಿದ್ದಾರೆ. ಅಷ್ಟೇ ಅಲ್ಲದೇ ಅವರಿಗೆ ಪರಿಹಾರವಾಗಿ ಐದು ಲಕ್ಷ ರೂಪಾಯಿ ಕೊಡಲು ಜಿಲ್ಲಾಡಳಿತ ಸಿದ್ಧತೆ ಕೂಡ ನಡೆಸಿತ್ತು.