ಕರ್ನಾಟಕ

karnataka

ETV Bharat / state

Black fungus: ಕಪ್ಪು ಶಿಲೀಂಧ್ರಕ್ಕೆ ಚಿಕ್ಕಮಗಳೂರಿನ ವ್ಯಕ್ತಿ ಬಲಿ - ಕಡೂರು ತಾಲೂಕು

ಬ್ಲ್ಯಾಕ್​​​ ಫಂಗಸ್ ಪತ್ತೆಯಾಗಿದ್ದ ಹಿನ್ನೆಲೆ ಮಂಗಳೂರಿನ ವೆನ್​ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾರೆ.

ಬ್ಲ್ಯಾಕ್​ ಫಂಗಸ್​​ಗೆ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಬಲಿ
ಬ್ಲ್ಯಾಕ್​ ಫಂಗಸ್​​ಗೆ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಬಲಿ

By

Published : Jun 2, 2021, 6:36 PM IST

ಚಿಕ್ಕಮಗಳೂರು:ಬ್ಲ್ಯಾಕ್​ ಫಂಗಸ್​ಗೆ ತುತ್ತಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಗ್ರಾಮದ ನಿವಾಸಿ ತಮ್ಮಯ್ಯ(68) ಮೃತ ವ್ಯಕ್ತಿ.

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ತಮ್ಮಯ್ಯ ಚಿಕಿತ್ಸೆ ಪಡೆಯುತ್ತಿದ್ದರು. 1 ತಿಂಗಳ ಹಿಂದೆ ಕೊರೊನಾದಿಂದ ಚೇತರಿಸಿಕೊಂಡಿದ್ದರು. ನಂತರ ಇವರಿಗೆ ಬ್ಲ್ಯಾಕ್​ ಫಂಗಸ್ ಕಾಣಿಸಿಕೊಂಡಿತ್ತು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆ ಬಳಿಕ ಬ್ಲ್ಯಾಕ್​ ಫಂಗಸ್ ಪತ್ತೆಯಾಗಿ ಮಂಗಳೂರಿನ ವೆನ್ಲಾಕ್​ ಆಸ್ಪತ್ರೆಗೆ ಸೇರಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ರಾತ್ರಿ ತಮ್ಮಯ್ಯ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ:ಕೌಟುಂಬಿಕ ಕಲಹ: ಖಾರದ ಪುಡಿ ಎರಚಿ ಮಲಗಿದ್ದವರ ಮೇಲೆ ಹಲ್ಲೆ

ABOUT THE AUTHOR

...view details