ಚಿಕ್ಕಮಗಳೂರು:ಸಫಾರಿಗೆಂದು ಬಂದಿದ್ದ ಇಲ್ಲಿನ ಪ್ರವಾಸಿಗರಿಗೆ ಹುಲಿಯೊಂದು ಸುಮಾರು 30 ನಿಮಿಷಗಳಿಗೂ ಅಧಿಕ ಕಾಲ ತನ್ನ ದರ್ಶನ ನೀಡಿದೆ.
ಸಫಾರಿ ಪ್ರಿಯರಿಗೆ ತನ್ನ ಗಾಂಭೀರ್ಯತೆಯ ದರ್ಶನ ನೀಡಿದ ಹುಲಿರಾಯ ತರೀಕೆರೆ ತಾಲೂಕಿನ ಲಕ್ಕವಳ್ಳಿಗೆ ಬಂದಿದ್ದ ಬೆಂಗಳೂರಿನ ಪ್ರವಾಸಿಗರು ಈ ಭಾಗದ ಅರಣ್ಯದಲ್ಲಿ ಇಂದು ಸಫಾರಿ ನಡೆಸುತ್ತಿದ್ದರು. ಈ ವೇಳೆ ಅರಣ್ಯದ ರಸ್ತೆಯಲ್ಲಿ ಮುರಿದು ಬಿದ್ದಿದ್ದ ಮರದ ರೆಂಬೆ ಮೇಲೆ ಗಂಡು ಹುಲಿ ಮಲಗಿ ಶಾಂತ ಸ್ವಭಾವದ ದರ್ಶನ ನೀಡಿದೆ.
ಸಫಾರಿ ಪ್ರಿಯರಿಗೆ ತನ್ನ ಗಾಂಭೀರ್ಯತೆಯ ದರ್ಶನ ನೀಡಿದ ಹುಲಿರಾಯ ಸಾಮಾನ್ಯವಾಗಿ ಹುಲಿಗಳು ಅರಣ್ಯದಲ್ಲಿ ಮನುಷ್ಯರ ಕಣ್ಣಿಗೆ ಕಾಣಿಸಿಕೊಳ್ಳುವುದಿಲ್ಲ. ಮನುಷ್ಯನನ್ನು ನೋಡಿದರೆ ಸಾಕು ಒಂದು ಕ್ಷಣವೂ ನಿಲ್ಲದೇ ಅರಣ್ಯದಲ್ಲಿ ಮಾಯವಾಗುತ್ತದೆ. ಆದರೆ ಈ ಗಂಡು ಹುಲಿ 30 ನಿಮಿಷಕ್ಕೂ ಅಧಿಕ ಕಾಲ ಕುಳಿತಲ್ಲೇ ಕುಳಿತು ಸಫಾರಿ ಪ್ರಿಯರಿಗೆ ದರ್ಶನ ನೀಡಿದೆ.
ಸಫಾರಿ ಪ್ರಿಯರಿಗೆ ತನ್ನ ಗಾಂಭೀರ್ಯತೆಯ ದರ್ಶನ ನೀಡಿದ ಹುಲಿರಾಯ ಜನರ ಸದ್ದು ಕೇಳಿದ ಬಳಿಕವೂ ಎಲ್ಲಿಯೂ ಹೋಗದೆ ಕುಳಿತಲ್ಲಿಯೇ ಕುಳಿತ ಹುಲಿಯ ಗಾಂಭೀರ್ಯತೆ ಕಂಡು ಪ್ರವಾಸಿಗರು ಸಹ ಖುಷಿಪಟ್ಟರು. ಇದೇ ವೇಳೆ ಹುಲಿಯ ಗಾಂಭೀರ್ಯತೆಯ ಅನೇಕ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿದ್ದಾರೆ.