ಚಿಕ್ಕಮಗಳೂರು: ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದ ಪರಿಣಾಮ ಕಾರಿನ ಮುಂಭಾಗ ಪುಡಿ ಪುಡಿಯಾಗಿರುವ ಘಟನೆ ಜಿಲ್ಲೆಯ ಆಲ್ದೂರು ಬಳಿ ನಡೆದಿದೆ.
ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿ ಬಿತ್ತು ಬೃಹತ್ ಗಾತ್ರದ ಮರ! - ಬೃಹತ್ ಮರ ಕಾರು ಜಖಂ
ಆಲ್ದೂರು ಸಮೀಪದ ತೋರಣಮಾವು ಬಳಿ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದ ಪರಿಣಾಮ ಕಾರು ಜಖಂ ಆಗಿದೆ.
![ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿ ಬಿತ್ತು ಬೃಹತ್ ಗಾತ್ರದ ಮರ!](https://etvbharatimages.akamaized.net/etvbharat/prod-images/768-512-4316958-thumbnail-3x2-jkhjgh.jpg)
ಆಲ್ದೂರು ಸಮೀಪ ಬೃಹತ್ ಮರ ಬಿದ್ದು ಕಾರು ಪುಡಿ ಪುಡಿ
ಆಲ್ದೂರು ಸಮೀಪದ ತೋರಣ ಮಾವು ಬಳಿ ಕಾರು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಬೃಹತ್ ಗಾತ್ರದ ಮರ ಕಾರಿನ ಮೇಲೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ಪ್ರಾಣ ಹಾನಿಯಾಗಿಲ್ಲ. ಆದರೆ, ಕಾರಿನ ಮುಂಭಾಗ ಸಂಪೂರ್ಣ ಹಾಳಾಗಿದೆ.
ಇನ್ನು ಕೂಡಲೇ ಸ್ಥಳೀಯರು ಅಪಘಾತ ಸ್ಥಳಕ್ಕೆ ದೌಡಾಯಿಸಿ ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಆಲ್ದೂರು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.