ಕರ್ನಾಟಕ

karnataka

ETV Bharat / state

ಅನಾಥ ವೃದ್ಧೆಯ ಅಂತ್ಯಸಂಸ್ಕಾರ: ಮಾನವೀಯತೆ ಮೆರೆದ ತರೀಕೆರೆ ಯುವಕರು - Lingadahalli Funeral of Old Ager

ಅನಾರೋಗ್ಯಕ್ಕೆ ತುತ್ತಾಗಿ ಪಾಳುಬಿದ್ದ ಕಟ್ಟಡವೊಂದರಲ್ಲಿ ವಾಸಿಸುತ್ತಿದ್ದ ವೃದ್ಧೆಯೋರ್ವಳನ್ನು 15 ದಿನಗಳ ಕಾಲ ಆರೈಕೆ ಮಾಡಿಕ ಯುವಕರು, ಇದೀಗ ಆಕೆ ಮೃತಪಟ್ಟ ನಂತರ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Funeral of Orphan Corpse
ಅನಾಥ ವೃದ್ಧೆಯ ಅಂತ್ಯಸಂಸ್ಕಾರ ಮಾಡಿದ ಯುವಕರು

By

Published : Oct 7, 2020, 2:06 PM IST

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಬಳಿ ಅನಾಥೆ ವೃದ್ಧೆವೋರ್ವಳು ಮೃತಪಟ್ಟಿದ್ದು, ಸ್ಥಳೀಯ ಯುವಕರು ಈ ವೃದ್ಧೆಯ ಅಂತ್ಯಸಂಸ್ಕಾರ ನಡೆಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಅನಾಥ ವೃದ್ಧೆಯ ಅಂತ್ಯಸಂಸ್ಕಾರ ಮಾಡಿದ ಯುವಕರು

ಕಳೆದ 15 ದಿನಗಳಿಂದ ವೃದ್ಧೆ ಅನಾರೋಗ್ಯಕ್ಕೆ ತುತ್ತಾಗಿ ಲಿಂಗದಹಳ್ಳಿ ಪಟ್ಟಣದ ಪಾಳು ಬಿದ್ದ ಕಟ್ಟಡವೊಂದರಲ್ಲಿ ತಂಗಿದ್ದರು. ಇದನ್ನು ಗಮನಿಸಿದ ಸ್ಥಳೀಯ ಯುವಕರು, ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಈ ವೃದ್ಧೆ ಬಗ್ಗೆ ಯಾವೊಬ್ಬ ಅಧಿಕಾರಿಯೂ ಗಮನ ಹರಿಸದ ಹಿನ್ನೆಲೆ, ಅಭಿಷೇಕ್, ವಿಕ್ಕಿ, ಯೂನಸ್, ಪರ್ವೇಜ್ ಎಂಬ ನಾಲ್ವರು ಯುವಕರು 15 ದಿನಗಳ ಕಾಲ ಆರೈಕೆ ಮಾಡಿದ್ದಾರೆ.

ವೃದ್ಧೆಯ ಆರೋಗ್ಯ ಸಂಪೂರ್ಣ ಹದಗೆಟ್ಟ ಹಿನ್ನೆಲೆ, ಆಸ್ಪತ್ರೆಗೆ ದಾಖಲಿಸಲು ಈ ಯುವಕರು ಮುಂದಾಗಿದ್ದರು. ಆದರೆ ಕೊರೊನಾ ಕಾರಣದಿಂದಾಗಿ ಯಾವುದೇ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳದ ಕಾರಣ ವೃದ್ಧೆ ಮೃತಪಟ್ಟಿದ್ದಾಳೆ. ಇಂದು ವಿಧಿ ವಿಧಾನಗಳ ಮೂಲಕ ಈ ಯುವಕರು ಆಕೆಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ABOUT THE AUTHOR

...view details