ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರಲ್ಲಿ ನಿವೃತ್ತ ಯೋಧರಿಗೆ ಜನರಿಂದ ಅದ್ಧೂರಿ ಸ್ವಾಗತ.. ದೇಶ ಸೇವೆಗೆ ಸಂದ ಗೌರವ - ಚಿಕ್ಕಮಗಳೂರಿನಲ್ಲಿ ನಿವೃತ್ತ ಯೋಧರಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

ಸತತ 20 ವರ್ಷಗಳ ಕಾಲ ಸೇನಾ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿದ ಮೂವರು ಯೋಧರನ್ನ ಅಜ್ಜಂಪುರ ಪಟ್ಟಣದಲ್ಲಿ ಗ್ರಾಮಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡರು.

ನಿವೃತ್ತ ಯೋಧರಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ
ನಿವೃತ್ತ ಯೋಧರಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

By

Published : Jan 11, 2022, 5:25 PM IST

ಚಿಕ್ಕಮಗಳೂರು: ಸತತ 20 ವರ್ಷಗಳ ಕಾಲ ಭಾರತಾಂಬೆಯ ಸೇವೆ ಸಲ್ಲಿಸಿ ಸೇನಾ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿದ ಯೋಧರನ್ನ ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ಗ್ರಾಮಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡರು.

ನಿವೃತ್ತ ಯೋಧರಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

ಭಾರತೀಯ ಸೇನೆಯಲ್ಲಿ ಬರೋಬ್ಬರಿ 20ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ಇಂದು ತಮ್ಮ ತವರೂರಿಗೆ ಬಂದ ಏರ್​ಫೋರ್ಸ್​ನಲ್ಲಿ ಸೇವೆ ಸಲ್ಲಿಸಿದ ಯೋಧ ಆರ್ ಶ್ರೀಕಾಂತ್, ಬಿಎಸ್ಎಫ್​​​ನಲ್ಲಿ ಸೇವೆ ಸಲ್ಲಿಸಿದ ಯೋಧ ಕೃಷ್ಣಮೂರ್ತಿ ಹಾಗೂ ಗುರಪ್ಪ ಅವರನ್ನ ಗ್ರಾಮಸ್ಥರು ಅದ್ಧೂರಿಯಾಗಿ ಆತ್ಮೀಯವಾಗಿ ಬರಮಾಡಿಕೊಂಡರು.

ಪಟ್ಟಣದಲ್ಲಿ 3-4 ಕಿಲೋ ಮೀಟರ್ ಉದ್ದಕ್ಕೂ ತೆರೆದ ಜೀಪ್​​ನಲ್ಲಿ ಱಲಿ ಮಾಡಿ ಅಜ್ಜಂಪುರದ ಜನರು ಸಂಭ್ರಮಿಸಿದರು. ದಾರಿಯುದ್ದಕ್ಕೂ ಭಾರತ ಮಾತಾಕಿ ಜೈ, ವಂದೇ ಮಾತರಂ ಅನ್ನೋ ಘೋಷಣೆಗಳು ಮೊಳಗಿದವು. ಊರಿಗೆ ಆಗಮಿಸುತ್ತಿದ್ದಂತೆ ಶಾಲಾ ಮಕ್ಕಳು ವೀರ ಯೋಧರಿಗೆ ಹೂ ನೀಡಿ, ಸೆಲ್ಯೂಟ್ ಹೊಡೆದು ದೇಶಪ್ರೇಮ ಮೆರೆದರು.

ತಮ್ಮೂರಿನ ಜನರು ನೀಡಿದ ಅದ್ಧೂರಿ ಸ್ವಾಗತ ನೋಡಿ ಮೂವರು ಯೋಧರು ತಮ್ಮ ಸೇವೆ ಸಾರ್ಥಕವಾಯಿತು ಎಂದರು. ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿ ವಾಪಸ್ಸಾದಾಗ ಈ ರೀತಿಯ ಒಂದು ಸತ್ಕಾರ ಸಿಗುತ್ತೆ ಅನ್ನೋ ಕಲ್ಪನೆ ಯೋಧರಿಗಿರಲಿಲ್ಲ. ಎಲ್ಲವನ್ನೂ ಸರ್​ಪ್ರೈಸ್ ರೀತಿಯಲ್ಲಿ ಆಯೋಜಿಸಿ ತಮ್ಮೂರಿನ ಹೆಮ್ಮೆಯ ಯೋಧರ ಬಗ್ಗೆ ಊರಿನ ಜನರು ಗೌರವ, ಅಭಿಮಾನ ತೋರಿದರು.

For All Latest Updates

TAGGED:

ABOUT THE AUTHOR

...view details