ಚಿಕ್ಕಮಗಳೂರು:ಜೋಕಾಲಿ ಆಡುವ ವೇಳೆ ಕುತ್ತಿಗೆಗೆ ವೇಲು ಸಿಕ್ಕಿಕೊಂಡು ಪುಟ್ಟ ಬಾಲಕಿ ಪ್ರಾಣ ಕಳೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಜೋಕಾಲಿಯೇ ಪುಟ್ಟ ಬಾಲಕಿ ಜೀವಕ್ಕೆ ಎರವಾಯ್ತು! - undefined
ನಾಲ್ಕನೇ ತರಗತಿಯ ಪುಟ್ಟ ಬಾಲಕಿ ಜೋಕಾಲಿ ಆಡುತ್ತಿದ್ದ ವೇಳೆ, ಕುತ್ತಿಗೆಗೆ ವೇಲು ಸಿಕ್ಕಿಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಇಂತಹ ಆಘಾತಕಾರಿ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
![ಜೋಕಾಲಿಯೇ ಪುಟ್ಟ ಬಾಲಕಿ ಜೀವಕ್ಕೆ ಎರವಾಯ್ತು!](https://etvbharatimages.akamaized.net/etvbharat/prod-images/768-512-3581405-thumbnail-3x2-jghjgjkgjk.jpg)
ನಿಸರ್ಗ (9)ಮೃತ ಬಾಲಕಿ
ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿದ್ದ ನಿಸರ್ಗ (9)ಮೃತ ಬಾಲಕಿಯಾಗಿದ್ದಾಳೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಲ್ದೂರು ಸಮೀಪದ ಹುಕ್ಕುಂದ ಗ್ರಾಮದಲ್ಲಿ ಈ ದುರಂತ ನಡೆದಿದೆ. ಈ ದುರಂತ ನಿನ್ನೆಯೇ ನಡೆದಿದ್ದು, ಇಂದು ಪ್ರಕರಣ ಬೆಳಕಿಗೆ ಬಂದಿದೆ.
ನಿನ್ನೆ ಶಾಲೆಗೆ ರಜೆ ಇದ್ದ ಕಾರಣ ಮನೆಯಲ್ಲಿಯೇ ನಿಸರ್ಗ ಉಳಿದುಕೊಂಡಿದ್ದಳು. ಉಯ್ಯಾಲೆ ಆಡುವ ವೇಳೆ ಆಕಸ್ಮಿಕ ವಾಗಿ ಕುತ್ತಿಗೆಗೆ ವೇಲು ಸಿಕ್ಕಿಕೊಂಡಿದ್ದ ಪರಿಣಾಮ ಬಾಲಕಿ ಮೃತಪಟ್ಟಿದ್ದಾಳೆ. ಆಲ್ದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಜೋಕಾಲಿಯೇ ಪುಟ್ಟ ಬಾಲಕಿ ಜೀವಕ್ಕೆ ಎರವಾಯ್ತು
Last Updated : Jun 18, 2019, 5:14 AM IST