ಕರ್ನಾಟಕ

karnataka

ETV Bharat / state

ಅಡುಗೆ ಮನೆಯಲ್ಲಿ ಅವಿತು ಕುಳಿತಿದ್ದ 15 ಅಡಿ ಉದ್ದದ ಕಾಳಿಂಗ! - ಉರಗ ತಜ್ಞ ಆರೀಫ್

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಂಕ ಶಾಲೆಯಲ್ಲಿರುವ ಮಂಜುನಾಥ್ ಭಂಡಾರಿ ಎಂಬುವರ ಮನೆಗೆ ಕಾಳಿಂಗ ಸರ್ಪ ಬಂದಿದ್ದು, ಅಡುಗೆ ಮನೆಯಲ್ಲಿ ಮಲಗಿರುವ ಕಾಳಿಂಗ ಸರ್ಪವನ್ನು ನೋಡಿ ಮನೆಯಿಂದ ಎದ್ನೋ ಬಿದ್ನೋ ಎಂದು ಮನೆಯವರು ಓಡಿ ಹೋಗಿದ್ದಾರೆ.

ಕಾಳಿಂಗ ಸರ್ಪ

By

Published : Aug 1, 2019, 7:45 PM IST

ಚಿಕ್ಕಮಗಳೂರು:ದೈತ್ಯ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಬರೋಬ್ಬರಿ 15 ಅಡಿ ಗಾತ್ರದ ಬೃಹತ್ ಕಾಳಿಂಗ ಸರ್ಪ ಅಡುಗೆ ಮನೆಗೆ ಬಂದಿದ್ದು, ಅಡುಗೆ ಮನೆಯ ಮೇಲ್ಭಾಗದಲ್ಲಿ ಅಡಗಿ ಕುಳಿತಿದೆ.

ಕಾಳಿಂಗ ಸರ್ಪ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಂಕ ಶಾಲೆಯಲ್ಲಿರುವ ಮಂಜುನಾಥ್ ಭಂಡಾರಿ ಎಂಬುವರ ಮನೆಗೆ ಕಾಳಿಂಗ ಸರ್ಪ ಬಂದಿದ್ದು, ಅಡುಗೆ ಮನೆಯಲ್ಲಿ ಮಲಗಿರುವ ಕಾಳಿಂಗ ಸರ್ಪವನ್ನು ನೋಡಿ ಮನೆಯಿಂದ ಎದ್ನೋ ಬಿದ್ನೋ ಎಂದು ಮನೆಯವರು ಓಡಿ ಹೋಗಿದ್ದಾರೆ.

ಕೂಡಲೇ ಮನೆಯ ಮಾಲೀಕರು ಸ್ನೇಕ್ ಆರೀಫ್ ಅವರನ್ನು ಸ್ಥಳಕ್ಕೆ ಕರೆಯಿಸಿದ್ದು, ಆರೀಫ್ ಸತತ 30 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿದ್ದಾರೆ. ಆದರೂ ಅವರ ಕೈಗೆ ಸಿಗದೇ ಹಾವು ತನ್ನ ರೋಷವನ್ನು ಸ್ಥಳದಲ್ಲಿ ತೋರಿಸಿದ್ದು, ಅಡುಗೆ ಮನೆಯಲ್ಲಿದ್ದ ಡಬ್ಬಗಳನ್ನು ಕಚ್ಚಿ ಅಲ್ಲಿಯೇ ವಿಷ ಉಗುಳಿದೆ.

ನಂತರ ನಿಧಾನವಾಗಿ ಟಾರ್ಚ್ ಬೆಳಕಿನಿಂದ ಕಾಳಿಂಗ ಸರ್ಪವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಕಾಳಿಂಗ ಸರ್ಪ ಹಿಡಿದ ಮೇಲೆ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ. ನಂತರ ಮನೆಯ ಮುಂಭಾಗದಲ್ಲಿ ಕೆಲ ಕಾಲ ಕಾಳಿಂಗವನ್ನು ಬಿಟ್ಟು ಚೀಲಕ್ಕೆ ತುಂಬಿದ್ದಾರೆ. ಸ್ಥಳೀಯ ಅರಣ್ಯ ಸಿಬ್ಬಂದಿ ನೇತೃತ್ವದಲ್ಲಿ ಉರಗ ತಜ್ಞ ಆರೀಫ್ ಮೂಡಿಗೆರೆ ಮೀಸಲು ಅರಣ್ಯದಲ್ಲಿ ಕಾಳಿಂಗ ಸರ್ಪವನ್ನು ಬಿಟ್ಟು ಬಂದಿದ್ದಾರೆ.

ABOUT THE AUTHOR

...view details