ಕರ್ನಾಟಕ

karnataka

ETV Bharat / state

ಬೆಳಗ್ಗೆ ಕಾಲೇಜ್​, ಸಂಜೆ ಬೇಲ್​ಪುರಿ ಮಾರಾಟ: ಕಡುಬಡತನದಲ್ಲಿಯೂ ಎಂಜಿನಿಯರಿಂಗ್ ಕನಸು! - undefined

ಸಂಜೆ ಬೇಲ್​ಪುರಿ ಮಾರಿಕೊಂಡು ಚಿಕ್ಕಮಗಳೂರಿನ ಸಂಭ್ರಮ್​ ಎಂಜಿನಿಯರಿಂಗ್ ಮಾಡುತ್ತಿದ್ದಾನೆ. ಈತನ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಬೇಲ್​ಪುರಿ

By

Published : Apr 24, 2019, 9:46 PM IST

ಚಿಕ್ಕಮಗಳೂರು:ಎಲ್ಲ ಸೌಕರ್ಯವಿದ್ದೂ ಓದದೆ, ಸೋಮಾರಿಯಂತಿರುವ ವಿದ್ಯಾರ್ಥಿಗಳನ್ನು ನೋಡಿದ್ದೇವೆ. ಅಪ್ಪನ ದುಡ್ಡಲ್ಲಿ ಮಜಾ ಮಾಡುವ ಮಕ್ಕಳನ್ನೂ ನೋಡಿದ್ದೇವೆ. ಆದರೆ ತನ್ನ ಕಾಲ ಮೇಲೆ ನಿಂತು, ಸ್ವಾವಲಂಬನೆಯಿಂದ ವಿದ್ಯಾಭ್ಯಾಸ ಮಾಡುತ್ತಿರುವ ಈ ಹುಡುಗ ಇಂತಹವರಿಗೆ ಜೀವಂತ ಪಾಠವಾಗಿದ್ದಾನೆ.

ಈತನ ಹೆಸರು ಸಂಭ್ರಮ್. ಚಿಕ್ಕಮಗಳೂರಿನ ಎಐಟಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಇಂಜಿನಿಯರ್ ಓದುತ್ತಿದ್ದಾನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ನಿವಾಸಿ. ಸಂಭ್ರಮ್​ಗೆ ತಂದೆ ಇಲ್ಲ. ತಾಯಿ ಹಾಗೂ ಅಕ್ಕನೇ ಸರ್ವಸ್ವ. ವಾಸ ಮಾಡೋಕೆ ಸರಿಯಾದ ಸೂರಿಲ್ಲ. ತುತ್ತಿನ ಊಟಕ್ಕೂ ಹಾಹಾಕಾರ. ಇಂತಹ ಸಂಕಷ್ಟದಲ್ಲಿಯೂ ಮಗನನ್ನು ಎಂಜಿನಿಯರ್ ಮಾಡಬೇಕೆಂಬುದು ತಾಯಿಯ ಹೆಬ್ಬಯಕೆ!

ಬೇಲ್​ಪುರಿ

ಕಿತ್ತು ತಿನ್ನುವ ಬಡತನದಲ್ಲಿ ಎಂಜಿನಿಯರಿಂಗ್​ಗೆ ಹಣ ಹೊಂದಿಸೋದು ಸುಲಭದ ಮಾತಲ್ಲ. ಆದರೂ ತಾಯಿಯ ಆಸೆ ಈಡೇರಿಸಬೇಕೆಂದು ಪಣ ತೊಟ್ಟಿರುವ ಸಂಭ್ರಮ್ , ಸಂಜೆ ವೇಳೆ ಬೇಲ್​ಪುರಿ ಮಾರಿ ಒಂದಿಷ್ಟು ಹಣ ಹೊಂದಿಸಿಕೊಳ್ಳುತ್ತಿದ್ದಾರೆ

ಡಿಪ್ಲೋಮೊ ಓದುವಾಗ ಸಂಭ್ರಮ್​ ತಾಯಿ ಮಾಡಿಕೊಡುತ್ತಿದ್ದ ಸಮೋಸವನ್ನು ಸಂಜೆ ಮನೆಗೆ ಮನೆಗೆ ತೆರಳಿ ಮಾರುತ್ತಿದ್ದ. ಅದರಿಂದ ಸಂಗ್ರಹವಾಗಿದ್ದ ಅಲ್ಪ-ಸ್ವಲ್ಪ ಹಣದಿಂದ ಹಾಗೂ ಸ್ನೇಹಿತರು, ಬಂಧುಗಳ ಸಹಾಯದಿಂದ ಕಳೆದ ವರ್ಷ ಎಐಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್​​ಗೆ ಸರ್ಕಾರಿ ಸೀಟು ಪಡೆದು, ಒಂದಿಷ್ಟು ಫೀಸ್​ ಕಟ್ಟಿಕೊಂಡಿದ್ದಾನೆ. ಇದೀಗ ದ್ವೀತಿಯ ವರ್ಷದ ಎಂಜಿನಿಯರಿಂಗ್​ ಓದುತ್ತಿರೋ ಸಂಭ್ರಮ್, ಬೇಲ್​ಪುರಿ ಮಾರಿಕೊಂಡು ಹಣ ಕೂಡಿಡುತ್ತಿದ್ದಾನೆ

ಬೆಳಿಗ್ಗೆ ಕಾಲೇಜಿಗೆ ತೆರಳಿ, ಸಂಜೆಯಾಗುತ್ತಿದ್ದಂತೆಯೇ ಬೇಲ್​ಪುರಿ ವ್ಯಾಪಾರ ಮಾಡುತ್ತಿದ್ದಾನೆ. ಮನೆ ಮನೆಗೆ ತೆರಳಿ ಬೇಲ್​ಪುರಿ ಮಾರಿ ದಿನಕ್ಕೆ 400 ರಿಂದ 500 ರೂ ಸಂಪಾದಿಸುತ್ತಿದ್ದಾನೆ. ಸಂಭ್ರಮ್ ತುಂಬಾ ಚೆನ್ನಾಗಿ ಓದುತ್ತಿದ್ದಾನೆ. ಬಡತನದಿಂದ ಬಂದ ಹುಡುಗರು ಇಷ್ಟು ಚೆನ್ನಾಗಿ ಓದುತ್ತಿರೋದು ನಮಗೆ ಖುಷಿ, ನಮ್ಮ ಸಂಸ್ಥೆಗೂ ಹೆಮ್ಮೆ. ಸಂಭ್ರಮ್ ಥರದ ವಿದ್ಯಾರ್ಥಿಗಳಿಂದ ಕಾಲೇಜ್ ಕೂಡ ಸಂಭ್ರಮಿತ್ತದೆ ಎಂದೂ ಆತನ ಪ್ರಾಂಶುಪಾಲ ಡಾ.ಜಯದೇವ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details