ಕರ್ನಾಟಕ

karnataka

ETV Bharat / state

ಮದುವೆಗೂ ಮುನ್ನ ಮತ: ಚಿಕ್ಕಮಗಳೂರಿನಲ್ಲಿ ಕರ್ತವ್ಯ ಪ್ರಜ್ಞೆ ಮೆರೆದ ವಧು! - ಚುನಾವಣಾ ಅಖಾಡ 2023

ಚಿಕ್ಕಮಗಳೂರಿನ ಮತಗಟ್ಟೆ ಸಂಖ್ಯೆ 165 ರಲ್ಲಿ ವಧುವೊಬ್ಬರು ಮತದಾನ ಮಾಡಿದರು.

ಮತದಾನ ಮಾಡಿ ಕತ್ಯವ್ಯ ಪ್ರಜ್ಞೆ ಮೆರೆದ ವಧು
ಮತದಾನ ಮಾಡಿ ಕತ್ಯವ್ಯ ಪ್ರಜ್ಞೆ ಮೆರೆದ ವಧು

By

Published : May 10, 2023, 9:30 AM IST

Updated : May 10, 2023, 10:23 AM IST

ಚಿಕ್ಕಮಗಳೂರು:ಚಿಕ್ಕಮಗಳೂರಿನಲ್ಲಿ ಮತದಾನ ನಡೆಯುತ್ತಿದೆ. ಇಲ್ಲಿನ 165ನೇ ಮತಗಟ್ಟೆ ಕೇಂದ್ರದಲ್ಲಿ ಮಧುಮಗಳೊಬ್ಬರು ಮತದಾನ ಮಾಡಿದರು. ಮದುವೆ ಮನೆಯಿಂದ ನೇರವಾಗಿ ಮತಗಟ್ಟೆಗೆ ಆಗಮಿಸಿದ ಅವರು ಮದುವೆ ದಿರಿಸಿನಲ್ಲೇ ತಮ್ಮ ಹಕ್ಕು ಚಲಾಯಿಸಿದರು. ಈ ಮೂಲಕ ಮದುವೆ ಸಂಭ್ರಮದಲ್ಲೂ ಕರ್ತವ್ಯಪ್ರಜ್ಞೆ ಮೆರೆದು ಮಾದರಿಯಾದರು.

ಚಿಕ್ಕಬಳ್ಳಾಪುರದಲ್ಲಿ ತುಂಬು ಕುಟುಂಬದ ವೋಟಿಂಗ್​:ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಜನರು ಮತ ಚಲಾವಣೆ ಉತ್ತಮವಾಗಿದೆ. ಇಲ್ಲಿನ ಚಿಕ್ಕಬಳ್ಳಾಪುರ ಕ್ಷೇತ್ರದ ಒಂದೇ ಕುಟುಂಬದ 65 ಜನರು ಏಕಕಾಲಕ್ಕೆ ಬಂದು ಮತದಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ನಗರದ ಬಾದಾಮ್ ಕುಟುಂಬ ಸದಸ್ಯರು ಪ್ರತಿ ಚುನಾವಣೆಯಲ್ಲಿಯೂ ತಪ್ಪದೆ ಮತದಾನ ಮಾಡಿ ಮಾದರಿಯಾಗುತ್ತಿದ್ದಾರೆ.

ನಮ್ಮ ಕುಟುಂಬದಲ್ಲಿ 65 ಮತಗಳಿವೆ. ಯಾವುದೇ ಚುನಾವಣೆಯ ವೇಳೆ ಒಟ್ಟಿಗೆ ತೆರಳಿ ಮತದಾನ ಮಾಡುತ್ತೇವೆ. ಈವರೆಗೆ ಸುಮಾರು 15 ಚುನಾವಣೆಗಳಲ್ಲಿ ನಾವು ಭಾಗಿಯಾಗಿದ್ದೇವೆ. ಮುಂದೆಯೂ ಮಾಡುತ್ತೇವೆ ಎಂದು ಹೇಳುತ್ತಾರೆ ಬಾದಾಮ್​ ಕುಟುಂಬ ಸದಸ್ಯ ಗೋಪಾಲ ಕೃಷ್ಣ.

ಅಣ್ಣನ ಹೆಗಲೇರಿ ಬಂದು ತಮ್ಮ ವೋಟ್​:ವಿಜಯಪುರದಲ್ಲಿ ಮತದಾರರ ಉತ್ಸಾಹ ಜೋರಾಗಿದೆ. ನಗರದ ಎಸ್‌ಎಸ್ ಹೈಸ್ಕೂಲ್ ಆವರಣದಲ್ಲಿರುವ ಮತಗಟ್ಟೆ ಸಂಖ್ಯೆ 60 ರಲ್ಲಿ ವಿಕಲಚೇತನ ಸಹೋದರನನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದ ಅಣ್ಣ ಆತನಿಂದ ಮತ ಹಾಕಿಸಿ ಗಮನ ಸೆಳೆದರು. ವಿಕಲಚೇತನ ಅಬ್ದುಲ್ ಹಮೀದ್ ಅಣ್ಣನ ಸಹಾಯದೊಂದಿಗೆ ಮತ ಹಾಕಿದವರು. ಮತ ಹಾಕಲು ಇಂದು ಮುಂದು ನೋಡುವ ಜನರ ಮಧ್ಯೆ ಸಹೋದರರ ಉತ್ಸಾಹಕ್ಕೆ ಭೇಷ್​ ಹೇಳಲೇಬೇಕು.

ಇದನ್ನೂ ಓದಿ:ಚಿಕ್ಕಬಳ್ಳಾಪುರದಲ್ಲಿ ಒಂದೇ ಕುಟುಂಬದ 65 ಜನರಿಂದ ಮತದಾನ!

Last Updated : May 10, 2023, 10:23 AM IST

ABOUT THE AUTHOR

...view details