ಚಿಕ್ಕಮಗಳೂರು: ನಗರದಲ್ಲಿರುವ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಶುಶ್ರೂಷಕಿಯ ವೇಷದಲ್ಲಿ ಬಂದ ಖತರ್ನಾಕ್ ಮಹಿಳೆಯೊಬ್ಬಳು ನಾಲ್ಕು ದಿನದ ಗಂಡು ಮಗುವನ್ನು ಅಪಹರಿಸಿಕೊಂಡು ಹೋಗಿದ್ದಾಳೆ.
ತಾನು ನರ್ಸ್ ಎಂದು ಹೇಳಿದ ಅಪರಿಚಿತ ಮಹಿಳೆ 4 ದಿನದ ಗಂಡು ಮಗುವನ್ನು ಎತ್ತಿಕೊಂಡು ಹೋಗಿದ್ದಾಳೆ. ಚಿಕ್ಕಮಗಳೂರು ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಅಸ್ಸೋಂ ಮೂಲದ ಅಂಜಲಿ-ಸುನಿಲ್ ದಂಪತಿಗೆ ಹೊಸ ವರ್ಷದಂದು ದಂಪತಿಗೆ ಮಗು ಜನಿಸಿತ್ತು.