ಚಿಕ್ಕಮಗಳೂರು :ಗದ್ದೆ ಬಯಲಿನಲ್ಲಿ ಅವಿತು ಜನರನ್ನು ಭೀತಿಗೊಳ್ಳುವಂತೆ ಮಾಡಿದ್ದ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಘ ತಜ್ಞ ಆರೀಫ್ ರಕ್ಷಣೆ ಮಾಡಿ ಚಾರ್ಮುಡಿ ಘಾಟ್ ಅರಣ್ಯಪ್ರದೇಶದಲ್ಲಿ ಬಿಟ್ಟಿದ್ದಾರೆ.
ಬಿಲದಲ್ಲಿ ಅವಿತಿದ್ದ 15 ಅಡಿ ಕಾಳಿಂಗ ಸರ್ಪ.. ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಉರಘ ತಜ್ಙ ಆರೀಫ್
ಕಾಳಿಂಗ ಸರ್ಪವನ್ನು ಕಂಡು ಸ್ಥಳೀಯರು ಬೆಚ್ಚಿದ್ದಾರೆ. ಕೂಡಲೇ ಉರಗ ತಜ್ಞ ಆರೀಫ್ಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಆರೀಫ್ ಸತತ ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಕಾಳಂಗ ಸರ್ಪವನ್ನ ಸೆರೆಹಿಡಿದರು..
ಕಾಳಿಂಗ ಸರ್ಪ
ಜಿಲ್ಲೆಯ ಮೂಡಿಗೆರೆ ತಾಲೂಕಿನ ಅತ್ತಿಗೆರೆ ಗ್ರಾಮದ ಗದ್ದೆ ಬಯಲಿನ ಬಿಲವೊಂದರಲ್ಲಿ ಹಲವು ದಿನಗಳಿಂದ ಕಾಳಿಂಗ ಸರ್ಪ ವಾಸವಾಗಿತ್ತು. ಗದ್ದೆಯಲ್ಲಿ ನಿತ್ಯ ಇದರ ಓಡಾಟವಿತ್ತು. ಇದನ್ನು ಕಂಡು ಸಾರ್ವಜನಿಕರು ಹಾಗೂ ಗದ್ದೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಭೀತಿಗೊಳಗಾಗಿದ್ದರು.
ಇಂದು ಕೂಡ ಕಾಳಿಂಗನನ್ನು ನೋಡಿ ಸ್ಥಳೀಯರು ಬೆಚ್ಚಿದ್ದಾರೆ. ಕೂಡಲೇ ಉರಗ ತಜ್ಞ ಆರೀಫ್ಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಆರೀಫ್ ಸತತ ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಸೆರೆಹಿಡಿದರು. ಬಳಿಕ ಚಾರ್ಮಾಡಿ ಘಾಟ್‌ನ ಅರಣ್ಯಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ.