ಚಿಕ್ಕಮಗಳೂರು : ಇಂದು ಹೊಸದಾಗಿ 94 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2,511 ಕ್ಕೆ ಏರಿಕೆಯಾಗಿದೆ.
ಈ ದಿನ ತಾಲೂಕಿನಲ್ಲಿ 29, ಕಡೂರು ತಾಲೂಕಿನಲ್ಲಿ 39, ತರೀಕೆರೆ ತಾಲೂಕಿನಲ್ಲಿ 12, ಮೂಡಿಗೆರೆ ತಾಲೂಕಿನಲ್ಲಿ 05,ಕೊಪ್ಪ ತಾಲೂಕಿನಲ್ಲಿ 02, ಶೃಂಗೇರಿ ತಾಲೂಕಿನಲ್ಲಿ 03, ಎನ್ ಆರ್ ಪುರ ತಾಲೂಕಿನಲ್ಲಿ 04 ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ಇಂದು ಸೋಂಕಿಗೆ ಒಬ್ಬರು ಬಲಿಯಾಗಿದ್ದು, ಈವರೆಗೂ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 50 ಕ್ಕೆ ಏರಿಕೆಯಾಗಿದೆ.