ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು ಜಿಲ್ಲೆಯಲ್ಲಿ 91 ಕೊರೊನಾ ಪ್ರಕರಣಗಳು ಪತ್ತೆ - Chikkamagaluru corona latest news

ಕಾಫಿನಾಡು ಚಿಕ್ಕಮಗಳೂರಲ್ಲಿ ಇಂದು ಹೊಸದಾಗಿ 91 ಜನರಿಗೆ ಸೋಂಕು ಪತ್ತೆಯಾಗಿದೆ.

Chikkamagaluru
Chikkamagaluru

By

Published : Aug 17, 2020, 6:07 PM IST

ಚಿಕ್ಕಮಗಳೂರು:ಜಿಲ್ಲೆಯಲ್ಲಿ ಈ ದಿನ 91 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ಈ ದಿನ ತಾಲೂಕಿನಲ್ಲಿ 35, ಕಡೂರು ತಾಲೂಕಿನಲ್ಲಿ 33, ತರೀಕೆರೆ ತಾಲೂಕಿನಲ್ಲಿ 21, ಮೂಡಿಗೆರೆ ತಾಲೂಕಿನಲ್ಲಿ 02 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2272 ಕ್ಕೆ ಏರಿಕೆಯಾಗಿದೆ.

ಈ ದಿನ ಸೋಂಕಿಗೆ ಇಬ್ಬರು ಸಾವನಪ್ಪಿದ್ದು, ಈವರೆಗೂ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 49 ಕ್ಕೆ ಏರಿಕೆಯಾಗಿದೆ.

ಇಂದು ಕೊರೊನಾದಿಂದ 80 ಜನರು ಗುಣಮುಖರಾಗಿ ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದು, ಈವರೆಗೂ ಜಿಲ್ಲೆಯಲ್ಲಿ ಒಟ್ಟು 1,415 ಜನ ಸೋಂಕಿತರ, ಗುಣಮುಖರಾದಂತಾಗಿದೆ. ಇನ್ನು ಜಿಲ್ಲೆಯಲ್ಲಿ ಒಟ್ಟು 808 ಸಕ್ರಿಯ ಪ್ರಕರಣಗಳಿವೆ.

ಈ ದಿನ ಪತ್ತೆಯಾದ ಸೋಂಕಿತರು ವಾಸ ಮಾಡುತ್ತಿದ್ದ ಏರಿಯಾವನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಂಪೂರ್ಣ ಸೀಲ್ ಡೌನ್ ಮಾಡಿ ಕಟ್ಟೆಚ್ಚರ ವಹಿಸಿದೆ.

ABOUT THE AUTHOR

...view details