ಚಿಕ್ಕಮಗಳೂರು :ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಸಾಕಷ್ಟು ಅವಾಂತರಗಳನ್ನ ಸೃಷ್ಠಿಸ್ತಿದೆ. ಉಕ್ಕಿ ಹರಿಯುತ್ತಿರುವ ಹೇಮಾವತಿ ನದಿಯೊಳಗೆ ಕಾಲು ಜಾರಿ ಬಿದ್ದು ವೃದ್ಧೆಯೊಬ್ಬರು ಕೊಚ್ಚಿಕೊಂಡು ಹೋಗಿರುವ ಘಟನೆ ಮೂಡಿಗೆರೆ ತಾಲೂಕಿನ ಜನ್ನಾಪುರ ಅಗ್ರಹಾರದಲ್ಲಿರುವ ದೇವಾಲಯ ಸಮೀಪ ನಡೆದಿದೆ.
ಧಾರಾಕಾರ ಮಳೆ.. ಹೇಮಾವತಿ ನದಿಯಲ್ಲಿ ಕೊಚ್ಚಿಹೋಗಿದ್ದ ವೃದ್ಧೆ ಸಾವು - Death by drowning in a river
ದೇವಾಲಯಕ್ಕೆ ಹೋಗಿದ್ದ ವೇಳೆ ಕಾಲು ಜಾರಿ ನೀರು ಪಾಲಾಗಿದ್ದರು. ಇದೀಗ ಶವ ದೊರಕಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ..
ಧಾರಾಕಾರ ಮಳೆ: ನದಿಯಲ್ಲಿ ಕೊಚ್ಚಿ ಹೋಗಿ ವಯೋವೃದ್ಧೆ ಸಾವು
ಮಳೆಯಿಂದಾಗಿ ಇಲ್ಲಿನ ಹೇಮಾವತಿ ನದಿ ಉಕ್ಕಿ ಹರಿಯುತ್ತಿದೆ. ಈ ವೇಳೆ 87 ವರ್ಷದ ರುದ್ರಮ್ಮ ಎಂಬ ವೃದ್ಧೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಮೃತ ದೇಹ ತಂದಾಗ ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಗೋಣಿಬೀಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.