ಚಿಕ್ಕಮಗಳೂರು:ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡು 7 ಅಂಗಡಿಗಳು ಆಹುತಿಯಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ನಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಮಹೇಶ್ ಎಂಬುವರಿಗೆ ಸೇರಿದ ಏಳು ಅಂಗಡಿಗಳು ಬೆಂಕಿಯಿಂದ ಸಂಪೂರ್ಣ ಸುಟ್ಟುಹೋಗಿವೆ.
ಬೆಂಕಿ ಹಬ್ಬುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಪಕ್ಕದಲ್ಲೇ ಇದ್ದ ಮಸೀದಿಯ ಮೈಕ್ ಮೂಲಕ ಜನರಿಗೆ ಮಾಹಿತಿ ನೀಡಲಾಗಿದೆ. ಮುಂಜಾಗೃತವಾಗಿ ಅಕ್ಕ ಪಕ್ಕದ ಜನರು ಮನೆಯಿಂದ ಹೊರ ಬರುವಂತೆಯೂ ಸೂಚನೆ ನೀಡಲಾಗಿತ್ತು.