ಚಿಕ್ಕಮಗಳೂರು:ಕೋವಿಡ್- 19 ಲಸಿಕಾ ಅಭಿಯಾನದ ಯಶಸ್ವಿಗೆ ಪೂರ್ವ ಭಾವಿಯಾಗಿ ಮತ್ತು ಕೊರೊನಾ ಲಸಿಕಾ ವಿತರೆಣೆ ವ್ಯವಸ್ಥಿತವಾಗಿ ನೆರವೇರಿಸುವ ಉದ್ದೇಶದಿಂದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಸೇರಿದಂತೆ 6 ಕಡೆ ಕೋವಿಡ್ ಲಸಿಕಾ ತಾಲೀಮು ನಡೆಯಿತು.
ಜಿಲ್ಲಾಸ್ಪತ್ರೆ ಚಿಕ್ಕಮಗಳೂರು, ನಗರ ಆರೋಗ್ಯ ಕೇಂದ್ರ -ಎ, ಹೋಲಿಕ್ರಾಸ್ ಆಸ್ಪತ್ರೆ, ತಾಲೂಕು ಆಸ್ಪತ್ರೆ ಮೂಡಿಗೆರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹುಲಿಕೆರೆ ಕಡೂರು ತಾಲೂಕು, ಸಮುದಾಯ ಆರೋಗ್ಯ ಕೇಂದ್ರ, ಅಜ್ಜಂಪುರ, ತರೀಕೆರೆ ತಾಲೂಕು ಇಲ್ಲಿ ಕೋವಿಡ್ ಲಸಿಕಾ ತಾಲೀಮು ನಡೆಯಿತು. ಈ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಡಾ. ಕುಮಾರ್ ಉದ್ಘಾಟನೆ ಮಾಡಿದ್ದು, ಕೇಂದ್ರ ಸರ್ಕಾರದಿಂದ ಕೋವಿಡ್-19 ಲಸಿಕೆ ಬರುವ ಹಿನ್ನೆಲೆ ಜಿಲ್ಲೆಯಲ್ಲಿ ಒಟ್ಟು 6 ಕಡೆಗಳಲ್ಲಿ ಮಾದರಿ ಲಸಿಕಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.