ಚಿಕ್ಕಮಗಳೂರು :ಜಿಲ್ಲೆಯಲ್ಲಿ ಈ ದಿನ 55 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯ ಒಟ್ಟು ಕೊರೊನ ಸೋಂಕಿತರ ಸಂಖ್ಯೆ, 12503 ಕ್ಕೆ ಏರಿಕೆಯಾಗಿದೆ.
ಚಿಕ್ಕಮಗಳೂರು : 55 ಕೋವಿಡ್ ಸೋಂಕಿತರು ಪತ್ತೆ, 49 ಜನ ಗುಣಮುಖ - ಕೊರೊನಾ ವೈರಸ್
ಕೋವಿಡ್ ತನ್ನ ದೈನಂದಿನ ಕಾರ್ಯ ಮುಂದುವರೆಸಿದ್ದು ಚಿಕ್ಕಮಗಳೂರು ಜಿಲ್ಲೆಯಲ್ಲಿಂದು 55 ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ.
ಚಿಕ್ಕಮಗಳೂರು ಕೊರೊನಾ ವರದಿ
49 ಜನ ಸೋಂಕಿತರಿಂದು ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 11841 ಕ್ಕೆ ಏರಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 18, ಕಡೂರು ತಾಲೂಕಿನಲ್ಲಿ 08, ತರೀಕೆರೆ ತಾಲೂಕಿನಲ್ಲಿ 19, ಮೂಡಿಗೆರೆ ತಾಲೂಕಿನಲ್ಲಿ 04, ಶೃಂಗೇರಿ ತಾಲೂಕಿನಲ್ಲಿ 02, ಎನ್.ಆರ್. ಪುರ ತಾಲೂಕಿನಲ್ಲಿ 02, ಕೊಪ್ಪ ತಾಲೂಕಿನಲ್ಲಿ 02 ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ.
ಈವರೆಗೂ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 136ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 477 ಸಕ್ರಿಯ ಪ್ರಕರಣಗಳಿವೆ.