ಚಿಕ್ಕಮಗಳೂರು:ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಗೋಣಿಬೀಡು ಹೋಬಳಿ ಜನ್ನಾಪುರದ ಕರುಣಾಕರ ಎಂಬುವರ ಅಂಗಡಿಯಲ್ಲಿ 48 ಲೀಟರ್ ಹಾಲು ಕಳ್ಳತನ (milk theft case) ಮಾಡಲಾಗಿದ್ದು, ಈ ದೃಶ್ಯವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇಂದು ಬೆಳಗ್ಗೆ 4 ಗಂಟೆ ಸಮಯದಲ್ಲಿ ಕಳ್ಳರು ಕೃತ್ಯ ಎಸಗಿದ್ದಾರೆ. ಮೂಡಿಗೆರೆಯಿಂದ ಬೇಲೂರು ಕಡೆಗೆ ತೆರಳುವ ರಸ್ತೆಯಲ್ಲಿ ಕಾರೊಂದರಲ್ಲಿ ಬಂದ ಕಳ್ಳರು, 48 ಲೀಟರ್ ಹಾಲು ಕಳ್ಳತನ (milk theft case) ಮಾಡಿದ್ದಾರೆ.