ಚಿಕ್ಕಮಗಳೂರು:ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ ಹಿನ್ನೆಲೆ 4 ಗುಡಿಸಲು ಮನೆಗಳು ಸುಟ್ಟು ಕರಕಲಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ತರುವನಹಳ್ಳಿಯ ಭೋವಿ ಕಾಲೋನಿಯಲ್ಲಿ ನಡೆದಿದೆ.
ಆಕಸ್ಮಿಕ ಅಗ್ನಿ ಅವಘಡ: ಹೊತ್ತಿ ಉರಿದ 4 ಗುಡಿಸಲು - ಚಿಕ್ಕಮಗಳೂರು ಆಕಸ್ಮಿಕ ಅಗ್ನಿ ಅವಘಡ
ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ ಹಿನ್ನೆಲೆ 4 ಗುಡಿಸಲು ಮನೆಗಳು ಸುಟ್ಟು ಕರಕಲಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ತರುವನಹಳ್ಳಿಯ ಭೋವಿ ಕಾಲೋನಿಯಲ್ಲಿ ನಡೆದಿದೆ.

ತರುವನಹಳ್ಳಿಯ ಭೋವಿ ಕಾಲೋನಿಯಲ್ಲಿ ಅಗ್ನಿ ಅವಘಡ
ತರುವನಹಳ್ಳಿಯ ಭೋವಿ ಕಾಲೋನಿಯಲ್ಲಿ ಅಗ್ನಿ ಅವಘಡ
ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ತಗುಲಿದ್ದು, ಮನೆಗಳಲ್ಲಿದ್ದಂತಹ ಹಣ, ವಸ್ತುಗಳು ಸುಟ್ಟು ಭಸ್ಮವಾಗಿವೆ. ಕಣ್ಣ ಎದುರೇ ಗುಡಿಸಲುಗಳಿಗೆ ಬೆಂಕಿ ಬಿದ್ದು ಹೊತ್ತಿ ಉರಿಯುತ್ತಿದ್ದರೂ ನಂದಿಸಲಾಗಿದೇ ಮನೆ ಮಾಲೀಕರು ಕೆಲಕಾಲ ತಬ್ಬಿಬ್ಬಾದರು.
ಇನ್ನು ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೆ ಕಳೆದುಕೊಂಡವರು ಸದ್ಯಕ್ಕೆ ಗ್ರಾಮದ ದೇವಾಲಯದಲ್ಲಿ ಆಶ್ರಯ ಪಡೆದಿದ್ದು, ಕಡೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.