ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರಲ್ಲಿ ಮತ್ತೆ ಮೂವರಿಗೆ ಕೊರೊನಾ ಸೋಂಕು ದೃಢ - Ajjampura Taluk

ಚಿಕ್ಕಮಗಳೂರಲ್ಲಿಂದು ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದರಲ್ಲಿ ಓರ್ವ ವೈದ್ಯ ಸಹ ಸೇರಿದ್ದಾರೆ. ಒಬ್ಬ ಕೆಎಸ್​ಆರ್​ಟಿಸಿ ಬಸ್​​ ನಿರ್ವಾಹಕ, ಮತ್ತೊಬ್ಬ ಬೆಂಗಳೂರಿನಿಂದ ಬಂದಿದ್ದವರಾಗಿದ್ದಾರೆ.

3 More coronavirus cases reported in Chikkamagaluru today
ಚಿಕ್ಕಮಗಳೂರಲ್ಲಿ ಮತ್ತೆ ಮೂವರಿಗೆ ಕೊರೊನಾ ಸೋಂಕು ದೃಢ

By

Published : Jul 4, 2020, 11:43 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶನಿವಾರ ಓರ್ವ ವೈದ್ಯ ಸೇರಿ ಮೂವರಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ.

ಅಲ್ಲದೆ 7 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೂ ಒಟ್ಟು 38 ಮಂದಿ ಗುಣಮುಖರಾಗಿದ್ದಾರೆ.

ಸೋಂಕು ಪತ್ತೆಯಾದ ಈ ಮೂವರಲ್ಲಿ ಓರ್ವ ಕಡೂರು ತಾಲೂಕಿಗೆ ಸೇರಿದ್ದಾರೆ. ಮತ್ತಿಬ್ಬರು ಚಿಕ್ಕಮಗಳೂರು ತಾಲೂಕಿಗೆ ಸೇರಿದವರಾಗಿದ್ದಾರೆ. ಇದರಲ್ಲಿ ಓರ್ವ ವೈದ್ಯನಿಗೂ ಕೊರೊನಾ ಸೋಂಕು ತಗುಲಿದ್ದರೇ ಕೆಎಸ್​​​ಆರ್​​​ಟಿಸಿ ಬಸ್ ನಿರ್ವಾಹಕನಲ್ಲಿ ಈ ಸೋಂಕು ಪತ್ತೆಯಾಗಿದೆ. ಇನ್ನೋರ್ವ ಬೆಂಗಳೂರಿನಿಂದ ಬಂದವರಾಗಿದ್ದಾರೆ.

ಈ ಸೋಂಕಿತರ ಜೊತೆ ಪ್ರಾರ್ಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದವರ ಪತ್ತೆ ನಡೆಯುತ್ತಿದೆ. ಕೊರೊನಾ ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ABOUT THE AUTHOR

...view details