ಚಿಕ್ಕಮಗಳೂರು : ಜಿಲ್ಲೆಯ ಬಾಳೆಹೊನ್ನೂರಿನ ಭದ್ರಾ ಸೇತುವೆ ಮೇಲೆ 3 ಗಂಟೆಗಳ ಕಾಲ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಬಾಳೆಹೊನ್ನೂರಿನ ಭದ್ರಾ ಸೇತುವೆ ಮೇಲೆ 3 ತಾಸು ವಾಹನ ಸಂಚಾರ ನಿಷೇಧ - Bhadra Bridge of baalehonnur
ಭದ್ರಾ ಸೇತುವೆ ಕುಸಿಯುವ ಭೀತಿ ಎದುರಾಗಿದ್ದು,ಇದನ್ನು ಪರೀಕ್ಷೆ ಮಾಡಲು 3 ತಾಸು ವಾಹನ ಸಂಚಾರ ನಿಷೇಧಿಸಲಾಗಿದೆ.
![ಬಾಳೆಹೊನ್ನೂರಿನ ಭದ್ರಾ ಸೇತುವೆ ಮೇಲೆ 3 ತಾಸು ವಾಹನ ಸಂಚಾರ ನಿಷೇಧ](https://etvbharatimages.akamaized.net/etvbharat/prod-images/768-512-4810069-thumbnail-3x2-vish.jpg)
ಅಕ್ಟೋಬರ್ 23 ರಂದು ಬೆಳಗ್ಗೆ 10.30 ರಿಂದ 1.30 ರವರೆಗೂ ಸಂಚಾರಕ್ಕೆ ನಿಷೇಧ ಹೇರಲಾಗಿದ್ದು,ಇದರಿಂದ ಶೃಂಗೇರಿ, ಕಳಸ, ಹೊರನಾಡಿಗೆ ತೆರಳುವ ಪ್ರಯಾಣಿಕರಿಗೆ ಕೊಂಚ ತೊಂದರೆಯಾಗಲಿದೆ. ಸೇತುವೆ ಕುಸಿಯುವ ಹಂತದಲ್ಲಿರುವುದರಿಂದ ಆ ಸಮಯದಲ್ಲಿ ಅಧಿಕಾರಿಗಳು ಸಂಪೂರ್ಣವಾಗಿ ಸೇತುವೆ ಪರೀಕ್ಷಿಸಲಿದ್ದಾರೆ.
ಸೇತುವೆ ಪರೀಕ್ಷಾ ಯಂತ್ರವನ್ನು ಬಳಸಿ ಅಧಿಕಾರಿಗಳು ಪರಿವೀಕ್ಷಣೆ ನಡೆಸಲಿದ್ದು ವಿರಾಜ ಪೇಟೆ - ಬೈಂದೂರು ರಾ. ಹೆ 27ರಲ್ಲಿ ಭದ್ರಾ ನದಿಗೆ ನಿರ್ಮಿಸಿರುವ ಬೃಹತ್ ಸೇತುವೆ ಇದಾಗಿದೆ. ಈ ವೇಳೆಯಲ್ಲಿ ಸಾರ್ವಜನಿಕರು ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.