ಕರ್ನಾಟಕ

karnataka

ETV Bharat / state

ಹಿಂದುಗಳ ರಕ್ಷಣೆಗೆ 25 ಪ್ರಖರ ಹಿಂದುವಾದಿಗಳು ಚುನಾವಣೆಯಲ್ಲಿ ಸ್ಪರ್ಧೆ: ಪ್ರಮೋದ್ ಮುತಾಲಿಕ್

ಹಿಂದುಗಳ ರಕ್ಷಣೆಗೆ ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಿಟ್ಟರೆ ಯಾರೂ ಕೂಡ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

Shri Ramsena chief Pramod Muthalik
ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್

By

Published : Nov 14, 2022, 1:43 PM IST

ಚಿಕ್ಕಮಗಳೂರು:ಹಿಂದುಗಳ ರಕ್ಷಣೆಗಾಗಿ 25 ಪ್ರಖರ ಹಿಂದುವಾದಿಗಳು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿ, ಗೆದ್ದು ದತ್ತಪೀಠ ಮುಕ್ತಿ, ಗೋಹತ್ಯೆ, ಮತಾಂತರ, ಲವ್‍ಜಿಹಾದ್​ಅನ್ನು ನಿಲ್ಲಿಸುತ್ತೇವೆ ಎಂದು ದತ್ತಪೀಠದ ದೇವಸ್ಥಾನದ ಬಾಗಿಲಲ್ಲಿ ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಂಕಲ್ಪ ಮಾಡಿದ್ದಾರೆ.

ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು 25 ವರ್ಷಗಳಿಂದ ದತ್ತಪೀಠದ ಹೋರಾಟದ ಲಾಭ ಪಡೆದಿದ್ದಾರೆ. ಬಿಜೆಪಿ ಹುಟ್ಟಿದ್ದೆ ಹಿಂದುತ್ವಕ್ಕಾಗಿ, ಪ್ರಾಮಾಣಿಕತೆಗಾಗಿ, ಆದರೆ ಕೇಂದ್ರದಲ್ಲಿರುವ ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಿಟ್ಟರೆ ಯಾರೂ ಕೂಡ ಹಿಂದುಗಳ ರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದರು.

ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್

ಇವತ್ತು ರೌಡಿಶೀಟರ್​ಗಳು ಹೊರಗಡೆ ಆರಾಮವಾಗಿಯೇ ಓಡಾಡುತ್ತಿದ್ದಾರೆ. ಅವರನ್ನು ಬಂಧಿಸುವ ಕೆಲಸವಾಗುತ್ತಿಲ್ಲ. ಹಿಂದು ಕಾರ್ಯಕರ್ತರು ಕೊಲೆಯಾಗಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ಗೆದ್ದವರಿಗೆ ಹಿಂದುಗಳ ರಕ್ಷಣೆ ಮಾಡಲು ಆಗಿಲ್ಲ. ಹಾಗಾಗಿ, ಪ್ರಖರ ಹಿಂದುವಾದಿಗಳು, ಸ್ವಾಮೀಜಿಗಳು ರಾಜಕೀಯ ಪ್ರವೇಶ ಮಾಡಿ ಹಿಂದುತ್ವ ಉಳಿಸುತ್ತೇವೆ. ಮುಂದಿನ ವರ್ಷದ ದತ್ತಪೀಠದ ಅಭಿಯಾನ ಕೊನೆ ಅಭಿಯಾನವಾಗುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಚಿಕ್ಕಮಗಳೂರು: ದತ್ತಮಾಲಾ ಅಭಿಯಾನಕ್ಕೆ ಶಾಂತಿಯುತ ತೆರೆ

ABOUT THE AUTHOR

...view details