ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: 229 ಸೋಂಕಿತರು ಪತ್ತೆ, 65 ಮಂದಿ ಗುಣಮುಖ - Chickmagaluru latest news

ಜಿಲ್ಲೆಯಲ್ಲಿಂದು ಪತ್ತೆಯಾದ ಸೋಂಕಿತರು, ಗುಣಮುಖರಾದವರು ಹಾಗು ಮರಣ ಹೊಂದಿದವರ ವಿವರ ಇಲ್ಲಿದೆ.

Chickmagaluru corona cases
Chickmagaluru corona cases

By

Published : Aug 27, 2020, 7:10 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿಂದು ಒಂದೇ ದಿನ 229 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 3,447ಕ್ಕೆ ಏರಿಕೆಯಾಗಿದೆ.

ತಾಲೂಕುವಾರು ವಿವರ:

ಚಿಕ್ಕಮಗಳೂರು ತಾಲೂಕು- 83, ಕಡೂರು- 65, ತರೀಕೆರೆ- 50, ಮೂಡಿಗೆರೆ- 12, ಶೃಂಗೇರಿ- 10, ಎನ್.ಆರ್.ಪುರ- 03, ಕೊಪ್ಪ- 06 ಸೋಂಕಿತ ಪ್ರಕರಣಗಳು ವರದಿಯಾಗಿವೆ. ಸೋಂಕಿತರು ವಾಸ ಮಾಡುತ್ತಿದ್ದ ಪ್ರದೇಶವನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸೀಲ್‌ಡೌನ್ ಮಾಡಿ ಕಟ್ಟೆಚ್ಚರ ವಹಿಸಿದೆ.

ಗುಣಮುಖ:

ಇಂದು ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ 65 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗುವ ಮೂಲಕ ಗುಣಮುಖರ ಸಂಖ್ಯೆ 2,262ಕ್ಕೆ ತಲುಪಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,447‌ಕ್ಕೆ ತಲುಪಿದ್ದು ಈವರೆಗೆ 61 ಮೃತ ಪ್ರಕರಣಗಳು ವರದಿಯಾಗಿರುತ್ತದೆ. ಸದ್ಯ 1,154 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.

ABOUT THE AUTHOR

...view details