ಚಿಕ್ಕಮಗಳೂರು:ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ. ನಗರದ ಉಪ್ಪಳ್ಳಿಯ ನಿವಾಸಿ 52 ವರ್ಷದ ಪುರುಷನಿಗೆ, ಕೊರೊನಾ ಸೋಂಕು ತಗುಲಿ, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ತೀವ್ರ ಉಸಿರಾಟದ ತೊಂದರೆ ಎದುರಿಸುತ್ತಿದ್ದು, ಸಾವನ್ನಪ್ಪಿದ್ದಾರೆ.
ಚಿಕ್ಕಮಗಳೂರಲ್ಲಿ ಮಹಾಮಾರಿ ಕೊರೊನಾಗೆ ಇಬ್ಬರು ಬಲಿ - Corona Latest News
ಚಿಕ್ಕಮಗಳೂರಲ್ಲಿ ಕೊರೊನಾ ಆರ್ಭಟ ಮುಂದುವರೆದಿದೆ. ಇಂದು ಒಂದೇ ದಿನ ಇಬ್ಬರು ಕೊರೊನಾಗೆ ಬಲಿಯಾಗಿದ್ದು, ಜಿಲ್ಲೆಯಲ್ಲಿ ಸಾವಿಗೀಡಾದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
![ಚಿಕ್ಕಮಗಳೂರಲ್ಲಿ ಮಹಾಮಾರಿ ಕೊರೊನಾಗೆ ಇಬ್ಬರು ಬಲಿ 2 more death reported from Coronavirus in Chikmagalur](https://etvbharatimages.akamaized.net/etvbharat/prod-images/768-512-8013449-431-8013449-1594659110276.jpg)
ಚಿಕ್ಕಮಗಳೂರಲ್ಲಿ ಮಹಾಮಾರಿ ಕೊರೊನಾಗೆ ಇಬ್ಬರು ಬಲಿ
ಚಿಕ್ಕಮಗಳೂರಲ್ಲಿ ಮಹಾಮಾರಿ ಕೊರೊನಾಗೆ ಇಬ್ಬರು ಬಲಿ
ನಗರದ ರಾಮನ ಹಳ್ಳಿಯಲ್ಲಿ 76 ವರ್ಷದ ವೃದ್ಧೆ ಮನೆಯಲ್ಲಿಯೇ ಸಾವನ್ನಪ್ಪಿದ್ದರು. ಈ ವಯೋವೃದ್ಧೆ ಸಾವನ್ನಪ್ಪಿದ ಬಳಿಕ ಆರೋಗ್ಯ ಇಲಾಖೆಯ ಸಿಬ್ಬಂದಿ, ಸ್ಥಳಕ್ಕೆ ಭೇಟಿ ನೀಡಿ ಇವರ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದರು. ಸಂಜೆ ವೇಳೆಗೆ ಇವರ ವರದಿ ಕೊರೊನಾ ಪಾಸಿಟಿವ್ ಬಂದಿದೆ. ಅಲ್ಲದೆ ಜಿಲ್ಲೆಯಲ್ಲಿ ಈವರೆಗೆ ಕೊರೊನಾ ಸೋಂಕಿಗೆ ಐವರು ಬಲಿಯಾಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ತರೀಕೆರೆ ತಾಲೂಕಿನ ಅಜ್ಜಂಪುರದಲ್ಲಿ ಓರ್ವ ವೃದ್ಧೆ, ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯ ಓರ್ವ ಹಾಗೂ ಉಪ್ಪಳ್ಳಿ ಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದರು.