ಚಿಕ್ಕಮಗಳೂರು:ಜಿಲ್ಲೆಯಲ್ಲಿ ದುರಂತವೊಂದು ನಡೆದಿದೆ. ಮದುವೆಗೆ ವಿರೋಧ ಉಂಟಾದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಶರಣಾಗಿರುವ ಘಟನೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.
ಕೊನೆ ಆಸೆ ಈಡೇರಿಸಿಕೊಂಡ ಯುವ ಜೋಡಿ... ಮದುವೆ ದಿನವೇ ಮೂಡಿಗೆರೆಯಲ್ಲಿ ದುರಂತ! - ಇತ್ತೀಚಿನ ಚಿಕ್ಕಮಗಲೂರಿನ ಸುದ್ದಿ
ಮೂಡಿಗೆರೆಯಲ್ಲಿ ಯುವ ಪ್ರೇಮಿಗಳಿಬ್ಬರು ದುರಂತ ಅಂತ್ಯ ಕಂಡಿದ್ದಾರೆ. ನೂತನ್ ಮತ್ತು ಅಪೂರ್ವ ಎಂಬ ಜೋಡಿ ಮದುವೆಗೆ ವಿರೋಧ ಉಂಟಾದ ಹಿನ್ನೆಲೆಯಲ್ಲಿ ವಿಷ ಸೇವಿಸಿ ಬಾರದಲೋಕಕ್ಕೆ ತೆರಳಿದ್ದಾರೆ.
ಪ್ರೇಮವಿವಾಹಕ್ಕೆ ಕಟುಂಬಸ್ಥರ ವಿರೋಧ: ವಿಷ ಸೇವಿಸಿ ಆತಹತ್ಯೆಗೆ ಶರಣಾದ ಪ್ರೇಮಿಗಳು
ನೂತನ್(25), ಅಪೂರ್ವ(22) ಮೃತರು. ಮೊದಲು ಯುವಕ-ಯುವತಿ ಮದುವೆ ಮಾಡಿಕೊಂಡು ಬಳಿಕ ವಿಷ ಕುಡಿದಿದ್ದಾರೆ. ವಿಷಯ ತಿಳಿದ ಕೂಡಲೇ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವನ್ನಪ್ಪಿದ್ದಾರೆ.
ಸದ್ಯ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.