ಕರ್ನಾಟಕ

karnataka

ETV Bharat / state

ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಕೋವಿಡ್​ ವರದಿ... - ಚಿಕ್ಕಮಗಳೂರು ಕೊರೊನಾ ಪ್ರಕರಣಗಳು

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 184 ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ 186 ಕೋವಿಡ್​​ ಪ್ರಕರಣಗಳು ಪತ್ತೆಯಾಗಿದೆ.

184 corona cases in shimogga and 186 cases found in chickmagaluru
ಶಿವಮೊಗ್ಗ ಜಿಲ್ಲೆಯಲ್ಲಿ 184 - ಚಿಕ್ಕಮಗಳೂರಿನಲ್ಲಿ 186 ಕೋವಿಡ್​​ ಪ್ರಕರಣಗಳು ಪತ್ತೆ

By

Published : Oct 11, 2020, 9:41 PM IST

ಶಿವಮೊಗ್ಗ/ಚಿಕ್ಕಮಗಳೂರು: ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 184 ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ 186 ಕೋವಿಡ್​​ ಪ್ರಕರಣಗಳು ಪತ್ತೆಯಾಗಿವೆ.

ಶಿವಮೊಗ್ಗ:

ಜಿಲ್ಲೆಯಲ್ಲಿ ಇಂದು 184 ಜನರಲ್ಲಿ ಕೋವಿಡ್​ ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 17,427ಕ್ಕೆ ಏರಿಕೆಯಾಗಿದೆ. ಇಬ್ಬರು ಮೃತಪಟ್ಟಿದ್ದು, ಕೊರೊನಾಗೆ ಬಲಿಯಾದವರ ಸಂಖ್ಯೆ 319ಕ್ಕೆ ತಲುಪಿದೆ. ಇಂದು 250 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಜಿಲ್ಲೆಯಲ್ಲಿ ಈವರೆಗೂ 15,474 ಜನರು ಸಂಪೂರ್ಣ ಗುಣಮುಖರಾಗಿದ್ದಾರೆ.

ಸದ್ಯ ಜಿಲ್ಲೆಯಲ್ಲಿ 1,136 ಸೋಂಕಿತರು ಚಿಕಿತ್ಸೆಯಲ್ಲಿದ್ದಾರೆ. ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 129, ಕೋವಿಡ್ ಕೇರ್ ಸೆಂಟರ್​ನಲ್ಲಿ 96, ಖಾಸಗಿ ಆಸ್ಪತ್ರೆಯಲ್ಲಿ 232, ಮನೆಯಲ್ಲಿ 1,136 ಜನ ಐಸೋಲೇಷನ್, ಆರ್ಯುವೇದ ಕಾಲೇಜಿನಲ್ಲಿ 57 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಂಟೈನ್ಮೆಂಟ್ ಝೋನ್​​ ಸಂಖ್ಯೆ 6,828 ರಷ್ಟಿದ್ದು,‌ 4,127 ಝೋನ್​​ ವಿಸ್ತರಣೆಯಾಗಿದೆ.

ಶಿವಮೊಗ್ಗ-82, ಭದ್ರಾವತಿ-13, ಶಿಕಾರಿಪುರ-63, ತೀರ್ಥಹಳ್ಳಿ-12, ಸೊರಬ-02, ಸಾಗರ-08, ಹೊಸನಗರ-03, ಬೇರೆ ಜಿಲ್ಲೆಯಿಂದ ಬಂದ ಓರ್ವರಿಗೆ ಸೋಂಕು ತಗುಲಿದೆ. ಇಂದು ಜಿಲ್ಳೆಯಲ್ಲಿ1,357 ಜನರ ಕೋವಿಡ್​​ ಪರೀಕ್ಷೆ ನಡೆಸಲಾಗಿದ್ದು, 2.178 ಜನರ ವರದಿ ಬಂದಿದೆ.

ಚಿಕ್ಕಮಗಳೂರಿನಲ್ಲಿ 186 ಕೋವಿಡ್​​ ಪ್ರಕರಣಗಳು ಪತ್ತೆ

ಚಿಕ್ಕಮಗಳೂರು:

ಜಿಲ್ಲೆಯಲ್ಲಿ ಈ ದಿನ 186 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 10,582 ಕ್ಕೆ ಏರಿಕೆಯಾಗಿದೆ. 185 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೂ ಜಿಲ್ಲೆಯಲ್ಲಿ ಒಟ್ಟು 8,754 ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದಾರೆ.

ಚಿಕ್ಕಮಗಳೂರು- 55, ಕಡೂರು- 27, ಮೂಡಿಗೆರೆ- 11, ತರೀಕೆರೆ- 33, ಶೃಂಗೇರಿ- 03, ಕೊಪ್ಪ- 40, ಎನ್ಆರ್ ಪುರ- 17 ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ಇನ್ನೂ ಮೂವರು ಬಲಿಯಾಗಿದ್ದು, ಮೃತರ ಸಂಖ್ಯೆ 131ಕ್ಕೆ ಏರಿಕೆಯಾಗಿದೆ. ಇಂದು ಪತ್ತೆಯಾದ ಸೋಂಕಿತರು ವಾಸ ಮಾಡುತ್ತಿದ್ದ ಮನೆಯನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಂಪೂರ್ಣ ಸೀಲ್​​ಡೌನ್ ಮಾಡಿ ಕಟ್ಟೆಚ್ಚರ ವಹಿಸಿದೆ. ಸದ್ಯ 1,512 ಸಕ್ರಿಯ ಪ್ರಕರಣಗಳಿವೆ.

ABOUT THE AUTHOR

...view details