ಚಿಕ್ಕಮಗಳೂರು: 17ನೇ ವರ್ಷದ ದತ್ತಮಾಲಾ ಅಭಿಯಾನದ (Dattamaala campaign in Chikkamagaluru) ಅಂಗವಾಗಿ ಶ್ರೀರಾಮ ಸೇನೆಯ ಮಾಲಾಧಾರಿಗಳು ನಗರದಲ್ಲಿ ಮನೆ ಮನೆಗೆ ತೆರಳಿ ಪಡಿ ಸಂಗ್ರಹ ಮಾಡಿದರು.
ಚಿಕ್ಕಮಗಳೂರಿನಲ್ಲಿ ದತ್ತಮಾಲಾ ಅಭಿಯಾನ: ಮಾಲಾಧಾರಿಗಳಿಂದ ಪಡಿ ಸಂಗ್ರಹ - ದತ್ತಮಾಲಾ ಮಾಲಾಧಾರಿಗಳಿಂದ ಪಡಿ ಸಂಗ್ರಹ
ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠದಲ್ಲಿ ಶ್ರೀರಾಮ ಸೇನೆ (Sri Ram Sena) ವತಿಯಿಂದ ನಡೆಯುತ್ತಿರುವ 17ನೇ ವರ್ಷದ ದತ್ತಮಾಲಾ ಅಭಿಯಾನದ (Dattamaala campaign in Chikkamagaluru) ಅಂಗವಾಗಿ ನಿನ್ನೆ ಮಾಲಾಧಾರಿಗಳು ಪಡಿ ಸಂಗ್ರಹ ಮಾಡಿದರು.
![ಚಿಕ್ಕಮಗಳೂರಿನಲ್ಲಿ ದತ್ತಮಾಲಾ ಅಭಿಯಾನ: ಮಾಲಾಧಾರಿಗಳಿಂದ ಪಡಿ ಸಂಗ್ರಹ 17th Year Dattamaala campaign](https://etvbharatimages.akamaized.net/etvbharat/prod-images/768-512-13627741-thumbnail-3x2-lek.jpg)
ದತ್ತಮಾಲಾ ಮಾಲಾಧಾರಿಗಳಿಂದ ಪಡಿ ಸಂಗ್ರಹ
ನಗರದ ವಿಜಯಪುರ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಮನೆ ಮನೆಗೆ ತೆರಳಿ ದತ್ತಾತ್ರೇಯ ಸ್ವಾಮಿಗೆ ಪ್ರಿಯವಾದ ಅಕ್ಕಿ, ಬೆಲ್ಲ, ತೆಂಗಿನಕಾಯಿ, ಕಾಳುಗಳನ್ನು ಪಡಿಯ ರೂಪದಲ್ಲಿ ಸಂಗ್ರಹಿಸಿದರು. ಈ ವೇಳೆ ಶ್ರೀ ರಾಮಸೇನೆ (Sri Ram Sena) ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇಂದು ಇನಾಂ ದತ್ತಾತ್ರೇಯ ಪೀಠದಲ್ಲಿ (Inam Dattatreya Peetha) ಧಾರ್ಮಿಕ ಸಮಾರೋಪ ಸಮಾರಂಭ ನಡೆಯಲಿದ್ದು, ಸಾವಿರಾರು ಮಾಲಾಧಾರಿಗಳು ಭಾಗವಹಿಸಲಿದ್ದಾರೆ.