ಚಿಕ್ಕಮಗಳೂರು: ಜಿಲ್ಲೆಯಲ್ಲಿಂದು 163 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ, 7,083 ಕ್ಕೆ ಏರಿಕೆಯಾಗಿದೆ.
ತಾಲೂಕುವಾರು ಕೊರೊನಾ ಸೋಂಕಿತರ ಮಾಹಿತಿ:
ಚಿಕ್ಕಮಗಳೂರು ತಾಲೂಕಿನಲ್ಲಿ 77, ಕಡೂರು ತಾಲೂಕಿನಲ್ಲಿ 23, ತರೀಕೆರೆ - 39, ಮೂಡಿಗೆರೆ - 13, ಶೃಂಗೇರಿ - 04, ಕೊಪ್ಪ ತಾಲೂಕಿನಲ್ಲಿ 7 ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ.
ಗುಣಮುಖ:
ಕೊರೊನಾ ಸೋಂಕಿನಿಂದ ಇಂದು 145 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 5,487 ಜನ ಸೋಂಕಿತರು ಗುಣಮುಖರಾಗಿದಂತಾಗಿದೆ.
ಮೃತರಿಷ್ಟು :
ಈವರೆಗೂ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 103 ಕ್ಕೆ ಏರಿಕೆಯಾಗಿದೆ. ಇನ್ನು ಜಿಲ್ಲೆಯಲ್ಲಿ 1,489 ಸಕ್ರಿಯ ಪ್ರಕರಣಗಳಿವೆ. ಈ ದಿನ ಪತ್ತೆಯಾದ ಸೋಂಕಿತರು ವಾಸ ಮಾಡುತ್ತಿದ್ದ, ಮನೆಗಳನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಂಪೂರ್ಣ ಸೀಲ್ ಡೌನ್ ಮಾಡಿ ಮುಂಜಾಗ್ರತಾ ಕ್ರಮ ವಹಿಸಿದೆ.