ಕರ್ನಾಟಕ

karnataka

ETV Bharat / state

ಶೃಂಗೇರಿಯಲ್ಲಿ ಹೆಡೆ ಎತ್ತಿ ನಿಂತ 15 ಅಡಿ ಉದ್ದದ ಕಾಳಿಂಗ- ವಿಡಿಯೋ - ಚಿಕ್ಕಮಗಳೂರು ಲೇಟೆಸ್ಟ್​ ನ್ಯೂಸ್​

ಶೃಂಗೇರಿ ತಾಲೂಕಿನ ಹಳೇ ಕೊಪ್ಪ ಗ್ರಾಮದಲ್ಲಿ 15 ಅಡಿ ಉದ್ದದ ಬೃಹತ್​ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ.

15 Feet Cobra captured in Chikmagalur
ಚಿಕ್ಕಮಗಳೂರಲ್ಲಿ 15 ಅಡಿಯ ಬೃಹತ್​ ಗಾತ್ರದ ಕಾಳಂಗ ಸೆರೆ

By

Published : May 17, 2020, 10:14 AM IST

Updated : May 17, 2020, 11:30 AM IST

ಚಿಕ್ಕಮಗಳೂರು:ಸುಮಾರು 15 ಅಡಿ ಉದ್ದದ ಬೃಹತ್​ ಗಾತ್ರದ ಕಾಳಿಂಗ ಸರ್ಪವನ್ನು ಜಿಲ್ಲೆಯ ಶೃಂಗೇರಿ ತಾಲೂಕಿನ ಹಳೇ ಕೊಪ್ಪ ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ.

ಚಿಕ್ಕಮಗಳೂರಲ್ಲಿ 15 ಅಡಿಯ ಬೃಹತ್​ ಗಾತ್ರದ ಕಾಳಂಗ ಸೆರೆ

ಹಳೇ ಕೊಪ್ಪ ಗ್ರಾಮದ ರಘು ಎಂಬುವರ ಮನೆಯ ಅಂಗಳದಲ್ಲಿದ್ದ ಮರಳು ಗುಡ್ಡೆಯಲ್ಲಿ ಕಾಳಿಂಗ ಸರ್ಪ ಅಡಗಿತ್ತು. ಇದನ್ನು ಕಂಡ ಮನೆ ಮಾಲೀಕ ಕೂಡಲೇ ಶೃಂಗೇರಿಯ ಉರಗ ತಜ್ಞ ಸ್ನೇಕ್ ಅರ್ಜುನ್ ಅವರಿಗೆ ಕರೆ ಮಾಡಿದ್ದರು. ಕೂಡಲೇ ಸ್ಥಳಕ್ಕೆ ಬಂದ ಅರ್ಜುನ್,​ ಅರ್ಧ ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಸುಮಾರು 15 ಅಡಿ ಉದ್ದದ ಬೃಹತ್​ ಗ್ರಾಮದ ಕಾಳಿಂಗವನ್ನು ಸೆರೆ ಹಿಡಿದಿದ್ದಾರೆ.

ಬಳಿಕ ಸೆರೆ ಹಿಡಿದ ಕಾಳಿಂಗ ಸರ್ಪವನ್ನು ಶೃಂಗೇರಿ ಹೊರ ವಲಯದ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ.

Last Updated : May 17, 2020, 11:30 AM IST

ABOUT THE AUTHOR

...view details