ಚಿಕ್ಕಮಗಳೂರು :ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದ ಶೃಂಗೇರಿ ತಾಲೂಕಿನ ತಹಶೀಲ್ದಾರ್ ಅಂಬುಜಾ ಹಾಗೂ ನೆಮ್ಮಾರು ಪಂಚಾಯತ್‌ನ ಗ್ರಾಮ ಲೆಕ್ಕಿಗ ಸಿದ್ದಪ್ಪರನ್ನು 13 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಶೃಂಗೇರಿಯ ಕಾವಡಿ ವಾಸಿ ಸಂಜಯ್ಕುಮಾರ್ ಎಂಬುವರಿಗೆ ಮನೆಯ ಹಕ್ಕುಪತ್ರ ನೀಡಲು 60 ಸಾವಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ತಹಶೀಲ್ದಾರ್ ಅಂಬುಜಾ ಮತ್ತು ಗ್ರಾಮ ಲೆಕ್ಕಿಗ ಸಿದ್ದಪ್ಪ ನಿನ್ನೆ ಸಂಜಯಕುಮಾರ್ರಿಂದ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದರು.
ಬಳಿಕ ಶೃಂಗೇರಿ ನಿರೀಕ್ಷಣಾ ಮಂದರಿದಲ್ಲಿ ನಡೆದ ಅಧಿಕಾರಿಗಳನ್ನು ಬಂಧಿಸಿದಂತೆ ಅವರ ಕಡೆಯವರು ಹೈಡ್ರಾಮಾ ನಡೆಸಿದ್ದರು. ಬಳಿಕ ಸುದೀರ್ಘ ಕಿತ್ತಾಟದ ಬಳಿಕ ಇಬ್ಬರು ತಪ್ಪಿತಸ್ಥ ಅಧಿಕಾರಿಗಳನ್ನು ಎಸಿಬಿ ಪೊಲೀಸರು ವಿಚಾರಣೆ ನಡೆಸಿ ತಹಶೀಲ್ದಾರ್ ಅಂಬುಜಾರನ್ನು ಪ್ರಮುಖ ಆರೋಪಿಯಾಗಿ (ಎ1), ಸಿದ್ದೇಶ್ ಎ2 ಎಂದು ಪರಿಗಣಿಸಿ ಕೇಸ್ ದಾಖಲಿಸಿದ್ದರು.