ಚಿಕ್ಕಮಗಳೂರು: ಪಂಚಪೀಠಗಳಲ್ಲೇ ಮೊದಲ ಪೀಠವಾಗಿರೋ ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ 51 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ 51 ಅಡಿ ಎತ್ತರದ ಪ್ರತಿಮೆ ನಿರ್ಮಾಣಗೊಳ್ಳುತ್ತಿದೆ. ಈ ಪ್ರತಿಮೆ ನಿರ್ಮಾಣಕ್ಕೆ ಆಂಧ್ರಪ್ರದೇಶದ ಮಡಕಶಿರಾ ಕಲ್ಲು ಕ್ವಾರಿಯಿಂದ ಬೃಹತ್ ಶಿಲೆ ಆಗಮಿಸಿದೆ. ಹೌದು,100 ಟನ್ ತೂಕವುಳ್ಳ 20 ಅಡಿ ಉದ್ದವಿರುವ ಬೃಹತ್ ಶಿಲೆ ಮಠದ ಆವರಣ ತಲುಪಿದೆ.
ಸೆಪ್ಟೆಂಬರ್ 10 ರಂದು ಆಂಧ್ರಪ್ರದೇಶದ ಮಡಕಶಿರಾದಿಂದ 100 ಚಕ್ರದ ಟ್ರಕ್ನಲ್ಲಿ ಹೊರಟ ಈ ಶಿಲೆ ಐದು ದಿನಗಳ ಬಳಿಕ ಮಠಕ್ಕೆ ಆಗಮಿಸಿದೆ. ಇದರ ತೂಕ ಸುಮಾರು 100 ಟನ್ ಇದ್ದು, 20 ಅಡಿ ಉದ್ದವಿದೆ. ಸಾಗಣೆ ಕಾರ್ಯದಲ್ಲಿ 12 ಕಾರ್ಮಿಕರು ತೊಡಗಿದ್ದಾರೆ ಎಂದು ಕಲ್ಲು ಸಾಗಣೆಯ ಜಾವಾಬ್ದಾರಿ ಹೊತ್ತಿದ್ದ ಬೆಂಗಳೂರು ಮೂಲದ ಶ್ರೀಧರಬಾಬು ತಿಳಿಸಿದ್ದಾರೆ.