ಚಿಕ್ಕಬಳ್ಳಾಪುರ:ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಹೋಬಳಿಯ ಯುವಕರಿಂದ ಶ್ರೀನಿವಾಸ ಚಾರ್ಲಹಳ್ಳಿಯಲ್ಲಿ ಕಬಡ್ಡಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು.
ಗೌರಿಬಿದನೂರಲ್ಲಿ ಕಬಡ್ಡಿ ಪಂದ್ಯಾವಳಿ: ದೇಸಿ ಆಟ ಆಡಿ ಎಂಜಾಯ್ ಮಾಡಿದ ಯುವಕರು - Kabaddi Tournament at Gauribidanur
ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಹೋಬಳಿಯ ಯುವಕರಿಂದ ಶ್ರೀನಿವಾಸ ಚಾರ್ಲಹಳ್ಳಿಯಲ್ಲಿ ಕಬಡ್ಡಿ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು.
ಗೌರಿಬಿದನೂರು ಕಬಡ್ಡಿ ಪಂದ್ಯಾವಳಿ ಆಯೋಜಿಸಿದ್ದ ಯುವಕರು
ದೇಶಿಯ ಕ್ರೀಡೆಗಳು ಉಳಿಸಿ ಬೆಳೆಸಿ, ಮುನ್ನಡೆಸಿಕೊಂಡು ಹೋಗಬೇಕು. ಇಂದಿನ ಯುವ ಪೀಳಿಗೆ ಮೊಬೈಲ್, ಕಂಪ್ಯೂಟರ್ ಗೇಮ್‌ಗಳಿಗೆ ಮಾರು ಹೋಗದೆ ಗ್ರಾಮೀಣ ಪ್ರದೇಶಗಳಲ್ಲಿ ಪರಂಪರೆಯಾಗಿ ಬಂದಿರುವ ಕಬಡ್ಡಿ ಮತ್ತು ನಾನಾ ಬಗೆಯ ಕ್ರೀಡೆಗಳನ್ನು ಆಡಬೇಕು ಎಂದು ಆಯೋಜಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಪಂದ್ಯದಲ್ಲಿ ಪ್ರಥಮ ಬಹುಮಾನವನ್ನು ಬುಲೆಟ್ ಬಾಯ್ಸ್ , ದ್ವಿತೀಯ ಬಹುಮಾನವನ್ನು ಭಜರಂಗಿ ಬಾಯ್ಸ್ ತಂಡ ಪಡೆದುಕೊಂಡಿದೆ.