ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ: ಕೆರೆ ಕೋಡಿ ನೀರಲ್ಲಿ ಕೊಚ್ಚಿ ಹೋದ ಯುವಕನ ಶವ ಪತ್ತೆ - Youth Swept Away In Flood In Chikkaballapur

ಬಿಳ್ಳೂರು ಗ್ರಾಮದ ಕೆರೆ ಕೋಡಿ ಹರಿಯುತ್ತಿರುವುದನ್ನು ವೀಕ್ಷಿಸಲು ಹೋಗಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದ ಯುವಕನ ಶವ ಇಂದು ದೊರೆತಿದೆ.

youth-swept-away-in-rain-water-found-dead
ಯುವಕನ ಶಪ ಪತ್ತೆ

By

Published : Nov 21, 2021, 9:49 AM IST

Updated : Nov 21, 2021, 11:42 AM IST

ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಹಾಮಳೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ನಿನ್ನೆ ನೀರಿನಲ್ಲಿ ಕೊಚ್ಚಿಹೋಗಿದ್ದ ಬೋಯಿಪಲ್ಲಿ ಗ್ರಾಮದ ಯುವಕನ ಶವ ಇಂದು ಪತ್ತೆಯಾಗಿದೆ.


ಬಾಗೇಪಲ್ಲಿ ತಾಲೂಕಿನ ಬಿಳ್ಳೂರು ಕೆರೆ ಕೋಡಿ ಹರಿಯುತ್ತಿದೆ. ಇದನ್ನು ವೀಕ್ಷಿಸಲು ಹೋಗಿ ಬೋಯಿಪಲ್ಲಿ ಗ್ರಾಮದ ಐವರು ಯುವಕರು ನೀರಿನಲ್ಲಿ ಸಿಲುಕಿಕೊಂಡಿದ್ದರು. ಸ್ಥಳೀಯರು ಹಾಗೂ ಪೊಲೀಸ್ ಸಿಬ್ಬಂದಿ ನಾಲ್ವರು ಯುವಕರನ್ನು ರಕ್ಷಿಸಿದ್ದರು. ಆದರೆ ರಮಣ ಎಂಬಾತ ನೀರು ಪಾಲಾಗಿದ್ದ. ಇಂದು ಸ್ಥಳದಿಂದ 4 ಕಿಲೋ ಮೀಟರ್ ದೂರದಲ್ಲಿ ಯವಕನ ಶವ ಕಂಡುಬಂದಿದೆ.

WATCH : ಚಿಕ್ಕಬಳ್ಳಾಪುರದಲ್ಲಿ ಕೆರೆ ಕೋಡಿ ನೀರಿನಲ್ಲಿ ಕೊಚ್ಚಿ ಹೋದ ಯುವಕ

ಕಳೆದ ದಿನದಿಂದ ಹಗಲು ರಾತ್ರಿ ಎನ್ನದೇ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದರು. ಇದೀಗ ಶವವನ್ನು ನೀರಿನಿಂದ ಹೊರತೆಗೆದ ರಕ್ಷಣಾ ಸಿಬ್ಬಂದಿ ಕುಟುಂಬಸ್ಥರಿಗೆ ಹಸ್ತಾಂತರಿಸಿದರು.

Last Updated : Nov 21, 2021, 11:42 AM IST

ABOUT THE AUTHOR

...view details