ಕರ್ನಾಟಕ

karnataka

ETV Bharat / state

ಎಣ್ಣೆ ಪಾರ್ಟಿ ಕೊಡಿಸುವುದಾಗಿ ಹೇಳಿ ಯುವಕನನ್ನೇ ಕೊಲೆ ಮಾಡಿದ ಸ್ನೇಹಿತರು! - ಚಿಕ್ಕಬಳ್ಳಾಪುರ ಅಪರಾಧ ಸುದ್ದಿ

ಎಣ್ಣೆ ಕೊಡಿಸುವುದಾಗಿ ಹೇಳಿ ಯುವಕನೊಬ್ಬನನ್ನು ಕರೆದೊಯ್ದ ಸ್ನೇಹಿತರು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.

Young man Murder in Chikkaballapura, Chikkaballapura crime news, Young man Murder by friends in Chikkaballapura, ಚಿಕ್ಕಬಳ್ಳಾಪುರದಲ್ಲಿ ಯುವಕನ ಕೊಲೆ, ಚಿಕ್ಕಬಳ್ಳಾಪುರ ಅಪರಾಧ ಸುದ್ದಿ, ಚಿಕ್ಕಬಳ್ಳಾಪುರದಲ್ಲಿ ಸ್ನೇಹಿತರಿಂದಲೇ ಯುವಕನ ಕೊಲೆ,
ಬರ್ಬರವಾಗಿ ಕೊಲೆಯಾದ ಯುವಕ

By

Published : Jan 19, 2022, 10:37 AM IST

ಚಿಕ್ಕಬಳ್ಳಾಪುರ: ಎಣ್ಣೆ ಪಾರ್ಟಿಗೆಂದು ಕರೆದು ಯುವಕನೊಬ್ಬನನ್ನು ಸ್ನೇಹಿತರೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಸೀಗೆಹಳ್ಳಿ ಗ್ರಾಮದ ಹೊರವಲಯಲ್ಲಿ ನಡೆದಿದೆ.

ಸೀಗೆಹಳ್ಳಿ ಗ್ರಾಮದ ಮೋಹನ್ (28) ಮೃತ ಯುವಕ‌ ಎಂದು ತಿಳಿದು ಬಂದಿದೆ. ಪ್ರಭಾಕರ್, ಸುಮನ್, ನಂದನ್ ಮೇಲೆ ಕೊಲೆ ಆರೋಪ ಮಾಡಲಾಗಿದೆ. ಸ್ನೇಹಿತರ ನಡುವೆ ಹಳೆ ದ್ವೇಷ ಇತ್ತು ಎಂದು ತಿಳಿದು ಬಂದಿದೆ.

ಓದಿ:ಕೆಂಪೇಗೌಡ ಬಸ್ ನಿಲ್ದಾಣ ನಿರ್ಮಾಣಕ್ಕೆ ಶ್ರಮಿಸಿದ್ದ ಅಧಿಕಾರಿ ಬಿ.ಎಸ್. ಮುದ್ದಪ್ಪ ನಿಧನ

ಕಳೆದ ಸಂಜೆ ಸ್ನೇಹಿತರೆಲ್ಲರು ಎಣ್ಣೆ ಪಾರ್ಟಿಗೆ ಎಂದು ಸೀಗೆಹಳ್ಳಿ- ಗೆಜ್ಜಿಗಾನಹಳ್ಳಿ ಮಾರ್ಗಮಧ್ಯೆ ಇರುವ ನಿಲಗಿರಿ ತೋಪಿನ ನಿರ್ಜನ ಪ್ರದೇಶಕ್ಕೆ ಮೋಹನ್​ನನ್ನು ಕರೆದೊಯ್ದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಮೋಹನ್​ನನ್ನು ಆತನ ಸ್ನೇಹಿತರು ಭೀಕರವಾಗಿ ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ.

ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಕೊಲೆ ಬಗ್ಗೆ ದೂರು ದಾಖಲಿಸಿಕೊಂಡಿರುವ ಶಿಡ್ಲಘಟ್ಟ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details