ಚಿಕ್ಕಬಳ್ಳಾಪುರ;ಗುಡಿಬಂಡೆ ಪಟ್ಟಣದ ಹೊರವಲಯದ ಏಡುಗರ ಅಕ್ಕಮ್ಮ ದೇವಾಲಯದ ಸಮೀಪ ನೇಣು ಬಿಗಿದುಕೊಂಡು ತಿರುಮಣಿ ಗಿರೀಶ (28) ಸಾವನ್ನಪ್ಪಿದ್ದಾರೆ.
10 ದಿನಗಳ ಹಿಂದೆ ಪ್ರೇಮವಿವಾಹವಾಗಿದ್ದ ಯುವಕ ನೇಣಿಗೆ ಶರಣು - ಪ್ರೇಮ ವಿವಾಹ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದ ಏಡುಗರ ಅಕ್ಕಮ್ಮ ದೇವಾಲಯದ ಸಮೀಪ ನೇಣು ಬಿಗಿದುಕೊಂಡು ತಿರುಮಣಿ ಗಿರೀಶ (28) ಸಾವನ್ನಪ್ಪಿದ್ದಾರೆ.
ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
ದೇವಸ್ಥಾನ ಬಳಿ ಬಂಡೆಯ ಪಕ್ಕದಲ್ಲಿ ಹುಣಸೆ ಮರಕ್ಕೆ ಹಗ್ಗ ಕಟ್ಟಿ ಬಂಡೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಿರೀಶ ಅದೇ ತಾಲ್ಲೂಕಿನ ಮಾಚನಹಳ್ಳಿ ಗ್ರಾಮದಲ್ಲಿ ಹತ್ತು ದಿನಗಳ ಹಿಂದೆ ಪ್ರೇಮ ವಿವಾಹವಾಗಿ ಮನೆ ಬಿಟ್ಟು ಹೋಗಿ ಬೆಂಗಳೂರು ನಲ್ಲಿ ವಾಸವಾಗಿದ್ದರು. ಇಂದು ಬೆಳಿಗ್ಗೆ ಬೆಂಗಳೂರಿನಿಂದ ಗುಡಿಬಂಡೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಪ್ರಕರಣವು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.