ಕರ್ನಾಟಕ

karnataka

ETV Bharat / state

9ನೇ ತಾರೀಖಿನ ನಂತರ ಅಧಿಕಾರ ನನ್ನ ಕೈಗೆ ಬರುತ್ತೆ : ಕುಮಾರಸ್ವಾಮಿ - ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯಡಿಯೂರಪ್ಪ ವಿರುದ್ಧ ಆಕ್ರೋಶ

ಸಿದ್ದರಾಮಯ್ಯ 53 ತಾಲೂಕು ಕೇಂದ್ರಗಳನ್ನು ಘೋಷಣೆ ಮಾಡಿದ್ದಾರೆ. ಆದ್ರೆ ಅಲ್ಲಿಗೆ ಯಾವುದೇ ಬಿಡಿಗಾಸು ಬಿಡುಗಡೆಯಾಗಿಲ್ಲ, ಮಂಚೇನಹಳ್ಳಿ ತಾಲೂಕಾಗಲು ಎಷ್ಟು ವರ್ಷ ಬೇಕೊ ಗೊತ್ತಿಲ್ಲ. ಆದ್ರೆ 9 ನೇ ತಾರೀಖಿನ ನಂತ್ರ ಮತ್ತೆ ನನ್ನ ಕೈಗೆ ಅಧಿಕಾರ ಬರುತ್ತೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಮುನ್ಸೂಚನೆಯನ್ನು ನೀಡಿದ್ದಾರೆ.

kumaraswamy
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ

By

Published : Dec 2, 2019, 9:09 PM IST

Updated : Dec 2, 2019, 11:57 PM IST

ಚಿಕ್ಕಬಳ್ಳಾಪುರ: ಮೆಡಿಕಲ್ ಕಾಲೇಜು ಕಟ್ಟೋದೆ ದೊಡ್ಡದು ಅಂತ ಪ್ರಚಾರ ತಗೋತಿದಾರೆ. ಸಿದ್ದರಾಮಯ್ಯ ಮೆಡಿಕಲ್ ಕಾಲೇಜು ನೀಡಿದ್ರು. ಆದರೆ ಸಿದ್ದರಾಮಯ್ಯ ಹಣ ನೀಡಿಲ್ಲ ಎಂದು ಹೆಚ್​.ಡಿ. ಕುಮಾರಸ್ವಾಮಿ ಆರೋಪಿಸಿದರು.

ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿ ಮಾತನಾಡಿದ ಹೆಚ್​.ಡಿ. ಕುಮಾರಸ್ವಾಮಿ, ಕಾಂಗ್ರೆಸ್​ ಹಾಗೂ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲಾ ಕೇಂದ್ರವನ್ನು ಕೊಟ್ಟಿದ್ದೇನೆ, ತಾಲೂಕು ಕೇಂದ್ರ ಯಾವ ದೊಡ್ಡ ವಿಷಯ. ಸಿದ್ದರಾಮಯ್ಯ 53 ತಾಲೂಕು ಕೇಂದ್ರಗಳನ್ನು ಘೋಷಣೆ ಮಾಡಿದ್ದಾರೆ. ಆದ್ರೆ ಅಲ್ಲಿಗೆ ಯಾವುದೇ ಬಿಡಿಗಾಸು ಬಿಡುಗಡೆಯಾಗಿಲ್ಲ, ಮಂಚೇನಹಳ್ಳಿ ತಾಲೂಕಾಗಲು ಎಷ್ಟು ವರ್ಷ ಬೇಕೊ ಗೊತ್ತಿಲ್ಲ. ಆದ್ರೆ 9ನೇ ತಾರೀಖಿನ ನಂತ್ರ ಮತ್ತೆ ನನ್ನ ಕೈಗೆ ಅಧಿಕಾರ ಬರುತ್ತೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಮುನ್ಸೂಚನೆಯನ್ನು ನೀಡಿದರು.

ಮಾಜಿ ಸಿಎಂ ಕುಮಾರಸ್ವಾಮಿ

ನಗರದಲ್ಲಿ ಇಂದು ಜೆಡಿಎಸ್ ಅಭ್ಯರ್ಥಿ ಪರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಮತ ಯಾಚಿಸಿದರು. ಈ ವೇಳೆ ಮಾತನಾಡಿದ ಕುಮಾರಸ್ವಾಮಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ನನ್ನ ಮನೆ ಬಳಿ ಬರುವವರು ಯಾರೂ ಶ್ರೀಮಂತರಲ್ಲ, ಬೆಳಗ್ಗೆ ಆದರೆ ಬರುವವರು ಹಲವಾರು ಬಡ ಹೆಣ್ಣು ಮಕ್ಕಳು, ಚಿಕ್ಕ ಚಿಕ್ಕ ಮಕ್ಕಳನ್ನ ಎತ್ತಿಕೊಂಡು ಬರ್ತಾರೆ. ಹಾಗಾಗಿ ಈ ರಾಜ್ಯದಲ್ಲಿ ರೈತರ ಪರವಾದ, ಬಡವರ ಪರವಾದ ಸರ್ಕಾರವನ್ನು ಪುನಃ ತರುವುದಕ್ಕೆ ನೀವು ಭತ್ತದ ತೆನೆ ಹೊತ್ತಿರುವ ಮಹಿಳೆ ಗುರುತಿನ ಅಭ್ಯರ್ಥಿ ರಾಧಾಕೃಷ್ಣನ್ ಅವರಿಗೆ ಮತವನ್ನು ಹಾಕಿ ಆಶೀರ್ವದಿಸಿ ಎಂದು ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿಕೊಂಡರು

ಅಲ್ಲದೇ, ನಮ್ಮ ಪಕ್ಷದ ಲಿಂಗಾಯತ ಅಭ್ಯರ್ಥಿ ಮೂಲತಃ ಒಬ್ಬ ರೈತ ಕುಟುಂಬದವರಾಗಿದ್ದು, ಸರಳ ಸಜ್ಜನಿಕೆಯ ವ್ಯಕ್ತಿ, ಇವರ ಬಳಿ ಹಣವಿಲ್ಲ. ಇವತ್ತು ಲಿಂಗಾಯತ ಸಮುದಾಯದ ಹಲವಾರು ರೈತರು ಮಳೆಯ ಹೊಡೆತಕ್ಕೆ ಸಿಲುಕಿ ರಸ್ತೆ ಮೇಲೆ ವಾಸ ಮಾಡುವಂತಾಗಿದೆ. ಆದ್ರೆ ಯಡಿಯೂರಪ್ಪಗೆ ಅವರ ಮೇಲೆ ಯಾವುದೇ ಕರುಣೆ ಇಲ್ಲದಂತಾಗಿದೆ, ಅನರ್ಹ ಶಾಸಕರನ್ನು ಗೆಲ್ಲಿಸಿಕೊಡಿ ಎಂದು ಅವರು ಕೇಳಿಕೊಳ್ಳುತ್ತಿದ್ದಾರೆ, ಇವರು ಕೇವಲ ಮತಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೋಕಾಕ್​ನಲ್ಲಿರುವ 80.000 ಸಾವಿರ ಬಡ ರೈತರ ನೋವಿನ ಮೇಲೆ ಇವರು ಅಧಿಕಾರವನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ, ಹಾಗಾಗಿ ಲಿಂಗಾಯಿತ ಸಮುದಾಯ ಒಂದಾಗಬೇಕಿದೆ ಎನ್ನುತ್ತಿದ್ದಾರೆ ಎಂದು ಆರೋಪಿಸಿದರು.

Last Updated : Dec 2, 2019, 11:57 PM IST

ABOUT THE AUTHOR

...view details