ಕರ್ನಾಟಕ

karnataka

ETV Bharat / state

ತಿಥಿ ಕಾರ್ಯಕ್ಕೆ ಬಂದು ವಾಪಸ್ ತೆರಳುವ ವೇಳೆ ಕಾರ್ ಟೈರ್ ಬ್ಲಾಸ್ಟ್.. ಮಹಿಳೆ ಸಾವು, ಇಬ್ಬರ ಸ್ಥಿತಿ ಗಂಭೀರ - ರಾಷ್ಟ್ರೀಯ ಹೆದ್ದಾರಿ 44 ರ ಹಾರೋಬಂಡೆ

ಗೌರಿಬಿದನೂರು ನಗರದ ಹೊರವಲಯದಲ್ಲಿ ಕಾರ್​ ಟೈಯರ್​ ಬ್ಲಾಸ್ಟ್​ ಆದ ಪರಿಣಾಮ, ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಕಾರ್​ನ ಟೈರ್ ಬ್ಲಾಸ್ಟ್
ಕಾರ್​ನ ಟೈರ್ ಬ್ಲಾಸ್ಟ್

By ETV Bharat Karnataka Team

Published : Nov 6, 2023, 11:04 PM IST

ಬೈಕ್​ಗೆ ಕ್ವಾಂಟರ್ ಡಿಕ್ಕಿ

ಚಿಕ್ಕಬಳ್ಳಾಪುರ :ತಿಥಿ ಕಾರ್ಯಕ್ಕೆ ಬಂದು ಮನೆಗೆ ವಾಪಸ್ ತೆರಳುವ ವೇಳೆ ಕಾರಿನ ಟೈಯರ್ ಬ್ಲಾಸ್ಟ್ ಆದ ಪರಿಣಾಮ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗೌರಿಬಿದನೂರು ನಗರದ ಹೊರವಲಯದಲ್ಲಿ ನಡೆದಿದೆ.

ಮಧುಗಿರಿ ತಾಲೂಕಿನ ಕೊಡಗೇನಹಳ್ಳಿ ಹೋಬಳಿ ಗುಂಡಗಲ್ಲು ಗ್ರಾಮದ ಸುಶಿಲಮ್ಮ (56 ವರ್ಷ) ಮೃತ ಪಟ್ಟಿದ್ದು, ಡ್ರೈವರ್ ಮುರಳಿ (39 ವರ್ಷ) ಗುನವತಿ (36 ವರ್ಷ) ಗಂಭೀರವಾಗಿ ಗಾಯಗೊಂಡವರಾಗಿದ್ದಾರೆ. ಸದ್ಯ ಅವರನ್ನು ಸ್ಥಳೀಯ ಆಸ್ಪತ್ರೆಯಿಂದ ಬೆಂಗಳೂರಿಗೆ ರವಾನಿಸಿದ್ದಾರೆ.

ಗುಂಡುಗಲ್ಲು ಗ್ರಾಮದಲ್ಲಿ ಸಂಬಂಧಿಕರ ತಿಥಿ ಕಾರ್ಯಕ್ರಮವಿದ್ದಿದ್ದರಿಂದ ಕಳೆದ ದಿನ ಬಂದು ಕಾರ್ಯಕ್ರಮ ಮುಗಿಸಿಕೊಂಡಿದ್ದರು. ಇನ್ನು ಸುಶೀಲಮ್ಮ ಬೆಂಗಳೂರಿನಲ್ಲಿ ಕುಟುಂಬಸ್ಥರೊಂದಿಗೆ ಕೆಲಸ ಮಾಡಿಕೊಂಡಿದ್ದರು. ಬೆಂಗಳೂರಿಗೆ ಇಂದು ವಾಪಸ್ ಬರಲು ಹತ್ತಿರ ಹಾಗೂ ಸುರಕ್ಷಿತ ಮಾರ್ಗವಾದ ಗೌರಿಬಿದನೂರು ರಸ್ತೆಯಲ್ಲಿ ಪ್ರಯಾಣ ಬೆಳೆಸಿದ್ದಾರೆ. ಆದರೆ, ತಾಲೂಕಿನ ಅಲಕಪುರ ಗೇಟ್ ಬಳಿ ಕಾರಿನ ಟೈರ್ ಬ್ಲಾಸ್ಟ್ ಆದ ಪರಿಣಾಮ ಕಾರು ನಜ್ಜುಗುಜ್ಜಾಗಿದೆ. ಸುದ್ದಿ ತಿಳಿಯುತ್ತಿದಂತೆ ಘಟನಾ ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೈಕ್​ಗೆ ಕ್ವಾಂಟರ್ ಡಿಕ್ಕಿ (ಪ್ರತ್ಯೇಕ ಘಟನೆ): ಚಲಿಸುತ್ತಿದ್ದ ಬೈಕ್​ಗೆ ಕ್ವಾಂಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗುದ್ದಿದ ರಭಸಕ್ಕೆ ಕ್ವಾಂಟರ್ ಬೈಕ್ ನಡುರಸ್ತೆಯಲ್ಲಿ ಹೊತ್ತಿ ಉರಿದ ಘಟನೆ ಚಿಕ್ಕಬಳ್ಳಾಪುರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44 ರ ಹಾರೋಬಂಡೆ ಬಳಿ ನಡೆದಿದೆ.

ಓವರ್ ಸ್ಪೀಡಲ್ಲಿ ಸಂಚರಿಸುತಿದ್ದ ಬೈಕ್​ಗೆ ಕ್ವಾಂಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್​ಗೆ ಬೆಂಕಿ ತಗುಲಿದ್ದು, ಕ್ವಾಂಟರ್ ವಾಹನದ ಕೆಳಗೆ ಸಿಲುಕಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ ಇಡೀ ಕ್ಯಾಂಟರ್​ಗೆ ವ್ಯಾಪಿಸಿ ಎರಡು ವಾಹನಗಳು ಸುಟ್ಟು ಕರಕಲಾಗಿವೆ.

ಇಂದು ನಡೆದ ಅಪಘಾತ ಇತ್ತೀಚಿಗಷ್ಟೇ ತಾಲೂಕಿನಲ್ಲಿ ನಡೆದ ಭೀಕರ ಅಪಘಾತ ನಡೆದ ಸ್ಥಳದ ಸಮೀಪ ನಡೆದಿದೆ. ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಲ್ ಟ್ರಾಫಿಕ್ ಜಾಮ್ ಆಗಿತ್ತು. ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು, ಅಗ್ನಿ ಶಾಮಕದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಸವಾರ ಯಾರು?. ಸಿಮೆಂಟ್ ತುಂಬಿಸಿಕೊಂಡು ಹೋಗುತ್ತಿದ್ದ ಕ್ವಾಂಟರ್ ಮಾಲೀಕ ಯಾರು? ಅನ್ನೋದು ಇನ್ನಷ್ಟೆ ತಿಳಿಯಬೇಕಿದೆ.

ಇದನ್ನೂ ಓದಿ:ಮಂಡ್ಯ: ಹಾಡಹಗಲೇ ಕಾರಿನ ಗ್ಲಾಸ್ ಒಡೆದು ₹4.5 ಲಕ್ಷ ಎಗರಿಸಿ ಕಳ್ಳರು ಪರಾರಿ

ABOUT THE AUTHOR

...view details