ಚಿಕ್ಕಬಳ್ಳಾಪುರ: ಲಾಕ್ಡೌನ್ ಸಂಕಷ್ಟದಿಂದ ನೊಂದ ನೇಕಾರ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೈಯಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಲಾಕ್ಡೌನ್ ತಂದಿಟ್ಟ ಸಂಕಷ್ಟ: ಮಹಿಳೆ ಆತ್ಮಹತ್ಯೆ - ಚಿಕ್ಕಬಳ್ಳಾಪುರ ಕ್ರೈಮ್ ಲೆಟೆಸ್ಟ್ ನ್ಯೂಸ್
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೈಯಪ್ಪನಹಳ್ಳಿ ಗ್ರಾಮದಲ್ಲಿ ನೇಕಾರಿಯನ್ನೇ ವೃತ್ತಿಯಾಗಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಇದರಿಂದ ನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
![ಲಾಕ್ಡೌನ್ ತಂದಿಟ್ಟ ಸಂಕಷ್ಟ: ಮಹಿಳೆ ಆತ್ಮಹತ್ಯೆ Women committed suicide at Chikkaballapur](https://etvbharatimages.akamaized.net/etvbharat/prod-images/768-512-7914321-thumbnail-3x2-bng.jpg)
ನೇಕಾರ ಮಹಿಳೆ ಆತ್ಮಹತ್ಯೆಗೆ ಶರಣು
ನೇಕಾರ ಮಹಿಳೆ ಆತ್ಮಹತ್ಯೆಗೆ ಶರಣು
ಗ್ರಾಮದ ವೆಂಕಟಲಕ್ಷ್ಮಮ್ಮ(55) ನೇಣಿಗೆ ಶರಣಾದ ಮಹಿಳೆ. ಈ ಕುಟುಂಬ ನೇಕಾರಿಕೆಯನ್ನೇ ವೃತ್ತಿಯಾಗಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿತ್ತು. ಲಾಕ್ಡೌನ್ದಿಂದಾಗಿ ವ್ಯಾಪಾರ-ವಾಹಿವಾಟಿಲ್ಲದೆ ಜೀನವ ನಡೆಸಲು ಬ್ಯಾಂಕ್ ಸೇರಿದಂತೆ ಕೈ ಸಾಲ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ.
ಈ ನಡುವೆ ಮೃತ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದು, ಔಷಧಿಗೂ ಹಣವಿಲ್ಲದೆ ನೊಂದಿದ್ದರು. ಇಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.