ಕರ್ನಾಟಕ

karnataka

ETV Bharat / state

ಮದ್ಯದ ಅಮಲಿನಲ್ಲಿ ಮಹಿಳೆ ಕೊಂದ.. ಶವ ಹೊರಹಾಕಿ ಮನೆಯೊಳಗೆ ನಿದ್ದೆ ಮಾಡಿದ ಚಿಕ್ಕಬಳ್ಳಾಪುರದ ಭೂಪ! - ಚಿಕ್ಕಬಳ್ಳಾಪುರದಲ್ಲಿ ಮಹಿಳೆ ಕೊಲೆ

ವ್ಯಕ್ತಿಯೋರ್ವ ಮದ್ಯ ಕುಡಿದ ಅಮಲಿನಲ್ಲಿ ಮಹಿಳೆಯನ್ನು ಕೊಂದು ಬಳಿಕ ನಿದ್ರೆಗೆ ಜಾರಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರದಲ್ಲಿ ಮಹಿಳೆಯ ಕೊಲೆ,Woman Murder in chikkaballapur
ಚಿಕ್ಕಬಳ್ಳಾಪುರದಲ್ಲಿ ಮಹಿಳೆಯ ಕೊಲೆ

By

Published : Dec 6, 2021, 8:16 PM IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ಮಹಿಳೆಯನ್ನು ಕೊಂದು ಬಳಿಕ ನಿದ್ರೆಗೆ ಜಾರಿದ ಘಟನೆ ನಗರದ ನಕ್ಕಲಕುಂಟೆ ಬಡಾವಣೆಯಲ್ಲಿ ಇಂದು ನಡೆದಿದೆ.

ನರಸಿಂಹಪ್ಪ ಕೊಲೆ ಮಾಡಿದ ಆರೋಪಿ. ಮಹಿಳೆಯೊಂದಿಗೆ ನರಸಿಂಹಪ್ಪ ವಿವಾಹೇತರ ಸಂಬಂಧ ಹೊಂದಿದ್ದ. ಈ ಹಿನ್ನೆಲೆ ಕುಡಿದ ಅಮಲಿನಲ್ಲಿ ಆಕೆಯನ್ನು ಮನೆಗೆ ಕರೆಸಿದ್ದ. ಈ ವೇಳೆ ಯಾವುದೋ ವಿಷಯಕ್ಕೆ ಮನೆಯಲ್ಲಿ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಆಗ ಮನೆಯಲ್ಲಿದ್ದ ಮಾರಕಾಸ್ತ್ರದಿಂದ ಮಹಿಳೆಯ ತೆಲೆಗೆ ಹೊಡೆದಿದ್ದಾನೆ. ಇದರಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಬಳಿಕ ಆಕೆಯ ಶವವನ್ನು ಮನೆಯಿಂದ ಹೊರಗೆ ಹಾಕಿ, ಆತ ಒಳಗಡೆ ಮಲಗಿದ್ದಾನೆ ಎಂದು ತಿಳಿದುಬಂದಿದೆ.

ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಆರೋಪಿಯನ್ನು ಬಂಧಿಸಿದ್ದಾರೆ. ಸ್ಥಳಕ್ಕೆ ಚಿಕ್ಕಬಳ್ಳಾಫುರ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

(ಇದನ್ನೂ ಓದಿ: ಕಾಲೇಜು ಮುಚ್ಚುವಂತ ನಿರ್ಧಾರಕ್ಕೆ ಸರ್ಕಾರ ಮುಂದಾಗಲ್ಲ: ಅಶ್ವತ್ಥನಾರಾಯಣ)

ABOUT THE AUTHOR

...view details