ಗುಡಿಬಂಡೆ: ತಾಲೂಕಿನ ಗೌರಿಬಿದನೂರು ರಸ್ತೆ ಬದಿ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.
ಮೃತ ಮಹಿಳೆಯನ್ನು ಗೌರಿಬಿದನೂರು ತಾಲೂಕಿನ ಗೊಟ್ಲಾಕುಂಟೆ ಗ್ರಾಮದ ರಾಮಾಂಜಿ ಎಂಬುವರ ಪತ್ನಿ ಶಶಿಕಲಾ (45) ಎಂದು ಗುರುತಿಸಲಾಗಿದೆ. ಕಳೆದ ಸೋಮವಾರ ಮನೆಯಿಂದ ಹೋದ ಪತ್ನಿ ಹಿಂದಿರುಗಿ ಬಂದಿಲ್ಲ ಎಂದು ಪತಿ ರಾಮಾಂಜಿ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಂದು ಶಶಿಕಲಾ ಮೃತದೇಹ ಪತ್ತೆಯಾಗಿದೆ.