ಕರ್ನಾಟಕ

karnataka

ETV Bharat / state

ಸಿಂಗಿಂಗ್ ಆ್ಯಪ್​ನಲ್ಲಿ ಸ್ನೇಹಿತ ಹಾಡಲು ನಿರಾಕರಿಸಿದ ಎಂಬ ಕಾರಣಕ್ಕೆ ವಿವಾಹಿತೆ ಆತ್ಮಹತ್ಯೆ!? - singing app

ಇಂಟರ್ನೆಟ್​ ಫ್ರೆಂಡ್​ಶಿಪ್​ಗೆ ಯಾವ ರೀತಿ ಯುವ ಸಮಾಜ ಒಗ್ಗಿ ಹೋಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಎಂಬಂತಿದೆ. ವಿವಾಹವಾಗಿ 10 ವರ್ಷ ತನ್ನ ಪತಿಯೊಂದಿಗೆ ಸಂಸಾರ ನಡೆಸಿದ ಇಬ್ಬರು ಮಕ್ಕಳ ತಾಯಿಯೊಬ್ಬಳು, ಆನ್​ಲೈನ್​ ಸಿಂಗಿಂಗ್​ ಆ್ಯಪ್​ಗೆ ಅಡಿಕ್ಟ್​ ಆಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಅಷ್ಟಕ್ಕೂ ಮೇಲ್ನೋಟಕ್ಕೆ ಆಕೆಯ ಆತ್ಮಹತ್ಯೆಗೆ ಕಾರಣ ಬಾಲಿಶ ಎಂಬಂತಿದೆ.

ವಿವಾಹಿತೆ ಆತ್ಮಹತ್ಯೆ

By

Published : Sep 28, 2019, 5:49 PM IST

ಚಿಕ್ಕಬಳ್ಳಾಪುರ:ಸಿಂಗಿಗ್ ಆ್ಯಪ್ ಹುಚ್ಚಾಟಕ್ಕೆ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ಟೌನ್‌ ಹಾಲ್ ಸಮೀಪದ ಗರ್ಲ್ಸ್ ಸ್ಕೂಲ್‌ ರಸ್ತೆಯ ನಿವಾಸಿ ಶಿಲ್ಪಾ (35) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ ಎಂದು ಗುರುತಿಸಲಾಗಿದೆ.

ಮದುವೆಯಾಗಿ 12 ವರ್ಷ ಕಳೆದಿರುವ ಶಿಲ್ಪಾಗೆ ಇಬ್ಬರು ಮಕ್ಕಳಿದ್ದಾರೆ. ಗಂಡ ಮಹಾಲಯ ಅಮವಾಸ್ಯೆಯ ಪ್ರಯುಕ್ತ ಪೂಜೆಗೆಂದು ಹೊರಗೆ ಹೋಗಿದ್ದ. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದ ವೇಳೆ, ಶಿಲ್ಪಾ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಿವಾಹಿತೆ ಆತ್ಮಹತ್ಯೆ

ಸಿಂಗಿಗ್ ಆ್ಯಪ್​ನಲ್ಲಿ ತನ್ನ ಸ್ನೇಹಿತನೊಂದಿಗೆ ನಿತ್ಯ ಹಾಡುಗಳನ್ನು ಹಾಡುತ್ತಿದ್ದು, ಇಂದು ತನ್ನ ಸ್ನೇಹಿತ ಹಾಡುಗಳನ್ನು ಹಾಡಲು ನಿರಾಕರಿಸಿದ ಎಂಬ ಕಾರಣಕ್ಕೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಚಿಕ್ಕಬಳ್ಳಾಪುರ ಆರಕ್ಷಕ ವೃತ್ತ ನಿರೀಕ್ಷಕ ಸುದರ್ಶನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details