ಕರ್ನಾಟಕ

karnataka

By

Published : Apr 27, 2022, 7:56 AM IST

ETV Bharat / state

ಕೊರೊನಾ 4ನೇ ಅಲೆ ಎಚ್ಚರಿಕೆ: ದೇಶಕ್ಕೆ ಬರುವ 8 ದೇಶದ ಪ್ರಜೆಗಳ ಮೇಲೆ ನಿಗಾ ಇಡಲಾಗಿದೆ ಎಂದ ಸಚಿವ ಸುಧಾಕರ್

ಕೊರೊನಾ ನಾಲ್ಕನೇ ಅಲೆ ತಡೆಗಟ್ಟುವ ಮತ್ತು ಮುನ್ನೆಚ್ಚರಿಕೆ ಕ್ರಮದಿಂದಾಗಿ ದೇಶಕ್ಕೆ ಬರುವ ಎಂಟು ದೇಶದ ಪ್ರಜೆಗಳ ಮೇಲೆ ನಿಗಾ ಇಡಲಾಗಿದೆ ಎಂದು ಸಚಿವ ಸುಧಾಕರ್​ ಹೇಳಿದ್ದಾರೆ.

closely monitored to 8 countries people visiting India,  monitored to 8 countries people visiting India says Minister Sudhakar, Minister Sudhakar news, ಭಾರತಕ್ಕೆ ಭೇಟಿ ನೀಡುವ ಇತರ ದೇಶಗಳ ಜನರ ಮೇಲೆ ನಿಗಾ, ದೇಶಕ್ಕೆ ಭೇಟಿ ನೀಡುವ ಇತರ ದೇಶಗಳ ಜನರ ಮೇಲೆ ನಿಗಾ ವಹಿಸಲಾಗಿದೆ ಎಂದ ಸಚಿವ, ಸಚಿವ ಸುಧಾಕರ್ ಸುದ್ದಿ,
ದೇಶಕ್ಕೆ ಬರುವ 8 ದೇಶದ ಪ್ರಜೆಗಳ ಮೇಲೆ ನಿಗಾ ಇಡಲಾಗಿದೆ ಎಂದ ಸಚಿವ ಸುಧಾಕರ್

ಚಿಕ್ಕಬಳ್ಳಾಪುರ: ವಿಮಾನ ನಿಲ್ದಾಣಗಳಲ್ಲಿ 8 ದೇಶಗಳಿಂದ ಬರುವ ಪ್ರಜೆಗಳ ಮೇಲೆ ನಿಗಾ ಇಡಲಾಗಿದ್ದು, ಸಾರ್ವಜನಿಕರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಎಲ್ಲ ಮುಖ್ಯಮಂತ್ರಿಗಳು ಆರೋಗ್ಯ ಸಚಿವರು ಅಧಿಕಾರಿಗಳ ಜೊತೆ ವಿಡಿಯೋ ಸಂವಾದ ಏರ್ಪಡಿಸಲಾಗಿದೆ. ಇಂದಿನಿಂದ ಯಾವ ರೀತಿ‌ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು, ಇಂದಿನ ವಸ್ತು ಸ್ಥಿತಿ ಆಧಾರದಲ್ಲಿ ಬೇರೆ ರಾಜ್ಯಗಳಲ್ಲಿ ಯಾವ ರೀತಿಯ ಕ್ರಮಗಳನ್ನು ಅನುಸರಿಸಬೇಕು ಎಂದು ಮಾರ್ಗದರ್ಶನ ನೀಡಲಾಗುತ್ತದೆ ಅಂತಾ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ

ದೇಶಕ್ಕೆ ಬರುವ 8 ದೇಶದ ಪ್ರಜೆಗಳ ಮೇಲೆ ನಿಗಾ ಇಡಲಾಗಿದೆ ಎಂದ ಸಚಿವ ಸುಧಾಕರ್

ಆಯಾ ರಾಜ್ಯಗಳ ಸ್ಥಿತಿಗತಿಗಳ ಸಿದ್ಧತೆ ಬಗ್ಗೆ ವಿಚಾರಿಸಿ ಕ್ರಮಗಳನ್ನು ತಿಳಿದುಕೊಳ್ಳುತ್ತಾರೆ. ಇದು ಸಾಮಾನ್ಯವಾಗಿ ಕಳೆದ ಮೂರು ಅಲೆಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಬಹುಶಃ ಬುಧವಾರ ಪ್ರಧಾನಿಗಳ ಜೊತೆ ನಡೆಯುವ ವಿಡಿಯೋ ಸಂವಾದದಲ್ಲಿ ವೈಜ್ಞಾನಿಕವಾಗಿ ಸರ್ಕಾರಕ್ಕೆ ಸಲಹೆಗಳನ್ನು ನೀಡಲಿದ್ದಾರೆ ಎಂದು ತಿಳಿಸಿದರು.

ಓದಿ:ಇಂದು ಸಿಎಂರಿಂದ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ.. ಮೂಡಬಿದಿರೆಯಿಂದಲೇ ಪಿಎಂ ವಿಡಿಯೋ ಕಾನ್ಫ್‌ರೆನ್ಸ್​ನಲ್ಲಿ ಬೊಮ್ಮಾಯಿ ಭಾಗಿ

ಈಗಾಗಲೇ ವಿಮಾನ ನಿಲ್ದಾಣಗಳಲ್ಲಿ 8 ದೇಶಗಳಿಂದ ಬರುವ ಪ್ರಜೆಗಳ ಮೇಲೆ ನಿಗಾ ಇಡಲಾಗಿದೆ. ಮನೆಗೆ ಬಂದ ನಂತರ ಟೆಲಿಮಾನಿಟರಿಂಗ್ ಮಾಡಲಾಗುತ್ತದೆ. ಯಾವುದೇ ರೋಗ ಲಕ್ಷಣಗಳು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಕಡ್ಡಾಯವಾಗಿ ಮಾಸ್ಕ್​ಗಳನ್ನು ಧರಿಸುವಂತೆ ಸೂಚಿಸಲಾಗಿದೆ. ಎರಡ್ಮೂರು ಡೋಸ್ ಪಡೆದುಕೊಳ್ಳುವರಿಗೆ ಅವಕಾಶ ಕೊಡಲಾಗಿದೆ‌. 6 ವರ್ಷ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ಕೊಡಲಾಗುತ್ತಿದ್ದು, ಮುಂದೆ ಬರುವ ಅಪಾಯ ತಪ್ಪಿಸಬಹುದು ಎಂದು ತಿಳಿಸಿದರು.

ABOUT THE AUTHOR

...view details