ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ನಿಮ್ಮಕಾನಹಳ್ಳಿ ಗ್ರಾಮದ ಹಜರತ್ ಸೈಯದ್ ಜಲಾಲ್ ಖಾಕಿ ಷಾ ದರ್ಗಾದ ಸಮೀಪದ ಖಬರಸ್ಥಾನ ಕಾಂಪೌಂಡ್ ನಿರ್ಮಿಸಲು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ₹ 5 ಲಕ್ಷ ಬಿಡುಗಡೆ ಮಾಡಿದ್ದರೂ ಕಾಮಗಾರಿ ಕೈಗೊಳ್ಳದ ಕಾರಣ ಜಿಲ್ಲಾ ವರ್ಕ್ಫ್ ಮಂಡಳಿ ದರ್ಗಾದ ಅಧ್ಯಕ್ಷರಿಗೆ ನೋಟಿಸ್ ಜಾರಿ ಮಾಡಿದೆ.
5 ಲಕ್ಷ ಕೊಟ್ಟರೂ ನಿರ್ಮಿಸದ ಕಾಂಪೌಂಡ್: ದರ್ಗಾಕ್ಕೆ ನೋಟಿಸ್ ಜಾರಿ ಮಾಡಿದ ವಕ್ಫ್ ಮಂಡಳಿ - ದರ್ಗಾಕ್ಕೆ ನೋಟಿಸ್ ಜಾರಿ ಮಾಡಿದ ವಕ್ಫ್ ಮಂಡಳಿ
₹ 5 ಲಕ್ಷ ಬಿಡುಗಡೆ ಮಾಡಿದರೂ ಖಬರಸ್ಥಾನಕ್ಕೆ ಕಾಂಪೌಂಡ್ ನಿರ್ಮಿಸದ ಕಾರಣ ಸ್ಪಷ್ಟೀಕರಣ ನೀಡುವಂತೆ ಚಿಕ್ಕಬಳ್ಳಾಪುರ ವಕ್ಫ್ ಮಂಡಳಿಯು ಹಜರತ್ ಸೈಯದ್ ಜಲಾಲ್ ಖಾಕಿ ಷಾ ದರ್ಗಾಕ್ಕೆ ನೋಟಿಸ್ ಜಾರಿ ಮಾಡಿದೆ.
ದರ್ಗಾ
ಕಾಂಪೌಂಡ್ ಕುಸಿದ ಪರಿಣಾಮ ಸರಿಪಡಿಸಲು ಕರ್ನಾಟಕ ವರ್ಕ್ಪ್ ಬೋರ್ಡ್ ಮಂಡಳಿ ₹ 5 ಲಕ್ಷ ಬಿಡುಗಡೆ ಮಾಡಿತ್ತು. ಆದರೆ, ಹಲವು ತಿಂಗಳಾದರೂ ಕಾಮಗಾರಿ ನಡೆಯದ ಕಾರಣ ಜಿಲ್ಲಾ ವರ್ಕ್ಫ್ ಬೋರ್ಡ್ ಮಂಡಳಿ 7 ದಿನಗಳ ಒಳಗೆ ಕಾಮಗಾರಿ ಖರ್ಚು ವೆಚ್ಚಗಳ ಕುರಿತು ಸ್ಪಷ್ಟೀಕರಣ ನೀಡದಿದ್ದಲ್ಲಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಮೇ 28ರಂದು ನೋಟಿಸ್ ಜಾರಿಗೊಳಿಸಿದೆ.
ದರ್ಗಾ ಕಮಿಟಿ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಖಬರಸ್ಥಾನ ಗೋಡೆ ಕಾಂಪೌಂಡ್ ನಿರ್ಮಿಸಲು ಏಕೆ ಮುಂದಾಗಲಿಲ್ಲ. ಹಾಗಾದರೆ ಖಾತೆಯಿಂದ ಹಣ ಡ್ರಾ ಮಾಡಿರುವ ಹಣ ಏನಾಯಿತು? ಹೀಗೆ ಸಾಕಷ್ಟು ಪ್ರಶ್ನೆಗಳು ಕಮಿಟಿ ವಲಯದಲ್ಲಿ ಕೇಳಿ ಬರುತ್ತಿವೆ.