ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ವ್ಯಾಪ್ತಿಯಲ್ಲಿ ಸುರಿದ ಧಾರಾಕಾರ ಮಳೆಗೆ ಜೂಲಪಾಳ್ಯ ಗ್ರಾಮವೊಂದರ ಮನೆಯ ಗೋಡೆ ಕುಸಿದ ಪರಿಣಾಮ ವೃದ್ಧೆಯೋರ್ವರು ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಾಗೇಪಲ್ಲಿಯಲ್ಲಿ ಧಾರಾಕಾರ ಮಳೆ: ಗೋಡೆ ಕುಸಿದು ವೃದ್ಧೆ ಸಾವು, ವೃದ್ಧನಿಗೆ ಗಂಭೀರ ಗಾಯ - wall fell down due to heavy rain
ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಜೂಲಪಾಳ್ಯ ಗ್ರಾಮದ ಮನೆಯೊಂದರ ಗೋಡೆ ಕುಸಿದಿದೆ. ಪರಿಣಾಮ 65 ವರ್ಷದ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೃತ ವೃದ್ಧೆಯ ಪತಿ ನರಸಿಂಹಪ್ಪ(70) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಾಗೇಪಲ್ಲಿಯಲ್ಲಿ ಧಾರಾಕಾರ ಮಳೆ; ಗೋಡೆ ಕುಸಿದು ವೃದ್ಧೆ ಸಾವು, ವೃದ್ಧನಿಗೆ ಗಂಭೀರ ಗಾಯ
ಗ್ರಾಮದ 65 ವರ್ಷದ ಸಾಲಮ್ಮ ಮೃತ ದುರ್ದೈವಿ. ವೃದ್ಧೆಯ ಪತಿ ನರಸಿಂಹಪ್ಪ(70) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಳೆಯ ಮನೆಯಲ್ಲಿ ಈ ವೃದ್ಧ ದಂಪತಿ ವಾಸವಿದ್ದರು. ಕಳೆದ ಮಂಗಳವಾರ ರಾತ್ರಿ ಒಂದೇ ಸಮನೆ ಸುರಿದ ಅಧಿಕ ಮಳೆಯಿಂದಾಗಿ ಮನೆಯ ಗೋಡೆ ಕುಸಿದಿದೆ. ಪರಿಣಾಮ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಈ ಘಟನೆ ಪಾತಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.