ಚಿಕ್ಕಬಳ್ಳಾಪುರ:ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಯುವಕರನ್ನು ರಕ್ಷಣೆ(youths rescued) ಮಾಡಿ ದಡ ಸೇರಿಸಿದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬ್ರಾಹ್ಮಣಹಳ್ಳಿಯಲ್ಲಿ ನಡೆದಿದೆ.
Video - ಬೈಕ್ನಲ್ಲಿ ಸೇತುವೆ ದಾಟುವ ವೇಳೆ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕರ ರಕ್ಷಣೆ - heavy rain in chikballapura
ದ್ವಿಚಕ್ರ ವಾಹನದಲ್ಲಿ ಸೇತುವೆ ದಾಟುವಾಗ ಜಾರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಚಿಕ್ಕಬಳ್ಳಾಪುರದ ಬ್ರಾಹ್ಮಣಹಳ್ಳಿಯ ಯುವಕರನ್ನು ಗ್ರಾಮಸ್ಥರು ರಕ್ಷಣೆ(villagers saved youths) ಮಾಡಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಸೇತುವೆ ದಾಟುವಾಗ ವಾಹನ ಸಮೇತ ಕೊಚ್ಚಿಹೋಗುತ್ತಿದ್ದ ಯುವಕರನ್ನು ತಾಲೂಕಿನ ಬ್ರಾಹ್ಮಣಹಳ್ಳಿಯಲ್ಲಿ ಗ್ರಾಮಸ್ಥರು ರಕ್ಷಿಸಿದ್ದಾರೆ. ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು ಜನಜೀವನ ಅಸ್ತವ್ಯಸ್ತವಾಗುತ್ತಿದೆ.
ಹಲವು ಗ್ರಾಮಗಳಿಗೆ ರಸ್ತೆ ಮಾರ್ಗಗಳು ಸಂಪೂರ್ಣ ಮುಚ್ಚಿಕೊಂಡು ಹೋಗಿದೆ. ಇದರಿಂದ ತಾಲೂಕಿನ ರಗುತ್ತಾಹಳ್ಳಿ ಕಡೆಯಿಂದ ಬ್ರಾಹ್ಮಣ ಹಳ್ಳಿಯ ಕಡೆ ಹೋಗುವ ಮಾರ್ಗ ಸಹ ಕಡಿತಗೊಂಡಿತ್ತು. ಇನ್ನೂ ಗ್ರಾಮಗಳಿಗೆ ಹೋಗಲು ಬೇರೊಂದು ಮಾರ್ಗವಿಲ್ಲದೆ ಯುವಕರು ಹರಿಯುವ ನೀರಿನಲ್ಲಿ ದಡ ಸೇರಲು ಮುಂದಾದಾಗ ಜಾರಿ ಬಿದ್ದಿದ್ದಾರೆ. ಇದೇ ವೇಳೆ ಯುವಕರನ್ನು ಗಮನಿಸಿದ ಗ್ರಾಮಸ್ಥರು, ಜೆಸಿಬಿ ಮೂಲಕ ರಕ್ಷಣೆ ಮಾಡಿ ಪ್ರಾಣಾಪಾಯದಿಂದ ಕಾಪಾಡಿದ್ದಾರೆ.