ಚಿಕ್ಕಬಳ್ಳಾಪುರ: ಮಾರಪ್ಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯವ್ಯಾಪ್ತಿಯಿಂದ ಹೊಸೂರು ಗ್ರಾಮವನ್ನು ಬಿಡಬಾರದೆಂದು ವಿರೋಧಿಸಿ ಗ್ರಾಮಸ್ಥರು ಡೈರಿ ಮುಂಭಾಗ ಪ್ರತಿಭಟನೆ ಮಾಡಿದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹೊಸೊರು ಗ್ರಾಮದಲ್ಲಿ ನಡೆದಿದೆ.
ಹೊಸೂರು ಗ್ರಾಮವನ್ನು ಬಿಡದಂತೆ ಆಗ್ರಹಿಸಿ ಪ್ರತಿಭಟನೆ ಓದಿ: ತಾಯಿ ದುಷ್ಟೆ ಎಂದು ಡೆತ್ ನೋಟ್ ಬರೆದು ಹೆತ್ತವಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಮಗ
ತಾಲೂಕಿನ ಮಾರಪ್ಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2020-21ನೇ ಸಾಲಿನ ವಿಶೇಷ ಸಭೆಯನ್ನು ಸಂಘದ ಆಡಳಿತಾಧಿಕಾರಿ ಪ್ರೇಮ್ ಕಿರಣ್ ಏರ್ಪಡಿಸಿದ್ದರು. ಮಾರಪ್ಪನಹಳ್ಳಿ ಸಂಘದ ಕಾರ್ಯ ವ್ಯಾಪ್ತಿಯಿಂದ ಹೊಸೂರು ಗ್ರಾಮವನ್ನು ಬಿಡುಗಡೆ ಮಾಡಬಾರದೆಂದು ಗ್ರಾಮಸ್ಥರು ಆಡಳಿತ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಸಭೆ ನಡೆಸುವುದರ ಬಗ್ಗೆ ಸಂಘದ ಎಲ್ಲಾ ಷೇರುದಾರರಿಗೆ ಮಾಹಿತಿ ನೀಡದೆ ಸಭೆ ನಡೆಸಿ, ಮಾರಪ್ಪನಹಳ್ಳಿ ಸಂಘದ ಕಾರ್ಯ ವ್ಯಾಪ್ತಿಯಿಂದ ಹೊಸೂರು ಗ್ರಾಮವನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ ಎಂದು ದೂರಿದ್ದಾರೆ. ಹೊಸೂರು ಗ್ರಾಮವನ್ನು ಬಿಡುಗಡೆ ಮಾಡಿ ಒಂದು ಪ್ರತ್ಯೇಕ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಸ್ಥಾಪಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಾರಪ್ಪನಹಳ್ಳಿ ಹಾಲು ಉತ್ಪಾದಕರ ಸಂಘದ ಕಾರ್ಯ ವ್ಯಾಪ್ತಿಯಿಂದ ಹೊಸೂರು ಗ್ರಾಮವನ್ನು ಬಿಡುಗಡೆ ಮಾಡಿಕೊಡುವ ಬಗ್ಗೆ ಮೇಲಾಧಿಕಾರಿಗಳಿಂದ ಆದೇಶ ಬಂದಿದ್ದು, ಆ ಆದೇಶದಂತೆ ನಾವು ಸಭೆ ನಡೆಸಿ ಹೊಸೂರು ಗ್ರಾಮವನ್ನು ಬಿಡುಗಡೆ ಮಾಡಿ ಒಂದು ಪ್ರತ್ಯೇಕ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಸ್ಥಾಪಿಸಲು ಮುಂದಾಗಿದ್ದೇವೆ ಎಂದು ಆಡಳಿತಾಧಿಕಾರಿ ತಿಳಿಸಿದರು. ಈ ವೇಳೆ ಸಂಘದ ಆವರಣದಲ್ಲಿ ಪೊಲೀಸ್ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.