ಚಿಕ್ಕಬಳ್ಳಾಪುರ: ಬೆಂಗಳೂರು ಮೂಲದ ಖಾಸಗಿ ವ್ಯಕ್ತಿಯೊಬ್ಬ ಸುಮಾರು ಏಳು ಕೋಟಿ ರೂಪಾಯಿ ಮೊತ್ತದಲ್ಲಿ ನಿರ್ಮಾಣ ಮಾಡುತ್ತಿರುವ ಮೊಟ್ಟೆ- ಕೋಳಿ ಫಾರಂ ವಿರುದ್ಧ ಸುತ್ತಮುತ್ತಲಿನ ಗ್ರಾಮಗಳ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕೋಳಿ ಫಾರಂ ಕಾಮಗಾರಿ ನಿಲ್ಲಿಸುವಂತೆ ದಿನಪೂರ್ತಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಈ ವಿಚಾರ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕೋಳಿ ಫಾರಂ ತೆರವಿಗೆ ದಿನವಿಡೀ ರಸ್ತೆ ತಡೆದು ಪ್ರತಿಭಟಿಸಿದ ಗ್ರಾಮಸ್ಥರು ಕೋಳಿ ಪೌಲ್ಟ್ರಿ ಫಾರಂಗಳಿಂದ ಬರುವ ದುರ್ವಾಸನೆ ಮತ್ತು ಕಾಯಿಲೆಗಳಿಗೆ ಬೇಸತ್ತು ಸಾಕಷ್ಟು ಜನ ಗ್ರಾಮಗಳನ್ನು ಖಾಲಿ ಮಾಡಿ ಬೇರೆಡೆ ವಲಸೆ ಹೋಗುವಂತಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೈಯಪ್ಪನಹಳ್ಳಿ ಗ್ರಾಮದಲ್ಲಿ ಕೋಳಿ ಫಾರಂ ನಿರ್ಮಾಣದಿಂದಾಗುವ ತೊಂದರೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಕಾಮಗಾರಿ ನಿಲ್ಲಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಕೋಳಿ ಫಾರಂ ಮಾಲೀಕರು ಮುಚ್ಚಳಿಕೆ ಪತ್ರ ಬರೆದಿರುವುದು ಒಂದೆಡೆ ಫೌಲ್ಟ್ರಿ ಫಾರಂ ಕಾಮಗಾರಿ ನಿಲ್ಲಿಸುವಂತೆ ಗ್ರಾಮಸ್ಥರು ಪ್ರತಿಭಟನೆ ಮಾಡಿದರೆ, ಮತ್ತೊಂದು ಕಡೆ ಪೌಲ್ಟ್ರಿ ಫಾರಂ ಮಾಲೀಕ ಮಾತ್ರ ನನಗೆ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ಸಿಕ್ಕಿದೆ. ಈಗಾಗಲೇ ಹೈಕೋರ್ಟ್‌ನಿಂದಲೂ ಪೌಲ್ಟ್ರೀ ಫಾರಂ ನಿರ್ಮಾಣ ಮಾಡಲು ಆದೇಶ ಕೊಟ್ಟಿದೆ. ಜೊತೆಗೆ ಫಾರಂನಿಂದ ಯಾವುದೇ ತೊಂದರೆಯಾದಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಉಲ್ಲೇಖಿಸಿ ಗ್ರಾಮಸ್ಥರಿಗೆ ಅಫಿಡವಿಟ್ ನೀಡಿದ್ದಾರೆ.
ಗ್ರಾಮದ ಸುತ್ತಲೂ ಸಾಕಷ್ಟು ಪೌಲ್ಟ್ರೀ ಫಾರಂಗಳಿವೆ. ಆದರೆ, ಗ್ರಾಮಸ್ಥರು ಮಾತ್ರ ನಮ್ಮ ಪೌಲ್ಟ್ರೀ ಫಾರಂ ತೆರವುಗೊಳಿಸುವಂತೆ ಪಟ್ಟು ಹಿಡಿದಿದ್ದಾರೆ ಎಂದು ಕೋಳಿ ಫಾರಂ ಮಾಲೀಕ ಮೊಹಮದ್ ಬೇಸರ ವ್ಯಕ್ತಪಡಿಸಿದ್ದಾರೆ.
ಓದಿ:ಆರಿದ್ರಾ ಮಳೆಗೆ ತಂಪಾದ ಬಿಸಿಲನಗರಿ: ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತ